ಅಂತರಾಷ್ಟ್ರೀಯ

ಬ್ರಹ್ಮ ದೇಗುಲ ಸ್ಫೋಟ ಪ್ರಕರಣ: ಪಾಕ್ ಪ್ರಜೆ ಸೇರಿ ಮೂವರ ಸೆರೆ

Pinterest LinkedIn Tumblr

Thailand

ಕೌಲಾಲಂಪುರ, ಸೆ.14: ಕಳೆದ ತಿಂಗಳಲ್ಲಿ 20 ಜನರನ್ನು ಬಲಿ ತೆಗೆದುಕೊಂಡ ಥಾಯ್ಲೆಂಡ್‌ನ ಬ್ರಹ್ಮ ದೇಗುಲದ ಭೀಕರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಬಂಧಿಸಿರುವ ಮೂವರು ಶಂಕಿತರಲ್ಲಿ ಒಬ್ಬನು ಪಾಕಿಸ್ಥಾನದವನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಕೆಲವು ದಿನಗಳ ಹಿಂದೆ ಒಬ್ಬ ಪಾಕಿಸ್ಥಾನೀಯ ಹಾಗೂ ಇಬ್ಬರು ಮಲೇಷಿಯಾದ ನಾಗರಿಕರನ್ನು ಬಂಧಿಸಲಾಗಿದೆ ಎಂದು ಮಲೇಷ್ಯಾದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಖಾಲಿದ್ ಅಬು ಬಕರ್ ತಿಳಿಸಿದ್ದಾರೆ.

“ಬ್ರಹ್ಮ ದೇಗುಲ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯಲ್ಲಿ ಇದೀಗ ನಮ್ಮ ವಶದಲ್ಲಿರುವ ಪಾಕ್ ಪ್ರಜೆ ಸಹಿತ ಮೂವರು ಶಂಕಿತರನ್ನು ವಿಚಾರಣೆಗೆ ಗುರಿಪಡಿಸಿದಾಗ ನಮಗೆ ನಿಖರ ಮಾಹಿತಿಗಳು ಸಿಗಬಹುದು; ನಾವು ಈ ವಿಷಯದಲ್ಲಿ ಥಾಯ್ ಪೊಲೀಸರಿಗೆ ಸರ್ವ ರೀತಿಯಲ್ಲಿ ನೆರವಾಗುತ್ತಿದ್ದೇವೆ’ ಎಂದು ಖಾಲಿದ್ ಹೇಳಿದರು.

ಥಾಯ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬಾತನ ಹೆಸರು ಮೈರೇಲಿ ಯೂಸುಫು. ಈತನನ್ನು ಈ ಪ್ರಕರಣದ ಮುಖ್ಯ ಸೂತ್ರಧಾರಿ ಎಂದು ತಿಳಿಯಲಾಗಿರುವ ಅಬ್ದುಲ್ ರೆಹಮಾನ್ ಅಲಿಯಾಸ್ ಇಜಾಜ್ ಎಂದೂ ಗುರುತಿಸಲಾಗಿದೆ. ಬ್ಯಾಂಕಾಕ್ ಬ್ರಹ್ಮ ದೇಗುಲ ಬಾಂಬ್ ದಾಳಿ ನಡೆಯುವ ಮುನ್ನಾ ದಿನ ಈತನು ಬಾಂಗ್ಲಾದೇಶಕ್ಕೆ ಹೋಗುವ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಥಾಯ್ಲೆಂಡ್‌ನಿಂದ ಪರಾರಿಯಾಗಿದ್ದ.

ಕೆಲವು ದಿನಗಳ ಹಿಂದೆ ಈ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟ ಇಬ್ಬರು ಭಾರತೀಯರನ್ನು ಶಂಕೆಯ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ವಿಚಾರಣೆಯಲ್ಲಿ ಅವರು ಅಮಾಯಕರೆಂದು ಗೊತ್ತಾಗಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

Write A Comment