ಅಂತರಾಷ್ಟ್ರೀಯ

ಚೀನಾದಲ್ಲಿ ನಾಯಿ ಸಾಕಿದರೆ ಗುಂಡಿಟ್ಟು ಕೊಳ್ಳಲು ಆದೇಶ !

Pinterest LinkedIn Tumblr

china dog

ಬೀಜಿಂಗ್: ಇಲ್ಲಿನ ದಯಾಂಗ್ ಜಿಲ್ಲೆಯ ಸ್ಥಳಿಯಾಡಳಿತ ಸಾಕು ನಾಯಿಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೆ, ಯಾರಾದರೂ ನಾಯಿ ಸಾಕಿದ್ದನ್ನು ಕಂಡುಬಂದರೆ, ಆ ನಾಯಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ದಯಾಂಗ್ ಜಿಲ್ಲಾಡಳಿತ ಘೊಷಿಸಿದೆ. ಪರವಾನಗಿ ಹೊಂದಿದ್ದರು ಕೂಡ ನಾಯಿಗಳನ್ನು ಕೊಲ್ಲುವುದಾಗಿ ಅದು ಎಚ್ಚರಿಕೆ ನೀಡಿದೆ.

ಜಿಲ್ಲಾಡಳಿತ ಈ ನಿರ್ಧಾರದಿಂದ ಕುಪಿತರಾಗಿರುವ ಸ್ಥಳೀಯರು ಹಾಗೀ ಶ್ವಾನಪ್ರಿಯರು, ಜಿಲ್ಲಾಡಳಿತದ ನಿರ್ಧಾರವನ್ನು ಖಂಡಿಸಿ, ಪ್ರತಿಭಟನೆ ಆರಂಭಿಸಿದ್ದಾರೆ.

ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಬಂಧವನ್ನು ಜಾರಿಗೊಳಿಸುತ್ತಿರುವುದಾಗಿ ಹೇಳುವ ಮೂಲಕ ಜಿಲ್ಲಾಡಳಿತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಬೀದಿನಾಯಿಗಳು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಮೇಲೆ ದಾಳಿ ಮಾಡಿ, ಕಚ್ಚುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವುಗಳ ಕಾಟದಿಂದ ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ ಸಾಕು ನಾಯಿಗಳು ಸೇರಿದಂತೆ ಶ್ವಾನಗಳೆಲ್ಲವನ್ನೂ ನಿರ್ಬಂಧಿಸಲು ನಿರ್ಧರಿಸಲಾಯಿತೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಚೀನಾದಲ್ಲಿ ಒಂದು ಮಗವನ್ನು ಹೊಂದಲು ಮಾತ್ರ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನರು ನಾಯಿಗಳನ್ನು ತಂದು ಸಾಕಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಶ್ವಾನಪ್ರಿಯರು ಹೆಚ್ಚಾಗುತ್ತಿದ್ದು, ವಧಿಸಲೆಂದು ನಾಯಿಗಳನ್ನು ಸಾಗಿಸುತ್ತಿರುವ ಲಾರಿಗಳನ್ನು ತಡೆದು, ಆ ನಾಯಿಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಜಿಲ್ಲಾಡಳಿತದ ಕಣ್ಣು ಕೆಂಪಾಗಲು ಕಾರಣವೆಂದು ಹೇಳಲಾಗುತ್ತಿದೆ.

Write A Comment