ರಾಷ್ಟ್ರೀಯ

9 ದಿನಗಳ ಕಾಲ ಪ್ರಾಣಿ ವಧೆ ನಿಷೇಧಿಸಿದ ಹರಿಯಾಣ ಸರ್ಕಾರ: ಹಲವರ ವಿರೋಧ

Pinterest LinkedIn Tumblr

chik

ಚಂಡೀಗಢ/ ಫತೇಹಾಬಾದ್: ಮಹಾರಾಷ್ಟ್ರದ ಹಾದಿ ಹಿಡಿದ ಹರಿಯಾಣ ಸರ್ಕಾರ ಕೂಡಾ ಸೆಪ್ಟೆಂಬರ್ 11ರಿಂದ ಒಂಬತ್ತು ದಿನಗಳ ಅವಧಿಗೆ ಪ್ರಾಣಿ ವಧೆಯನ್ನು ನಿಷೇಧಿಸಿದೆ. ಸೆಪ್ಟೆಂಬರ್ 11ರಿಂದ ಜೈನರ ‘ಪರ್ಯೂಷಣ ಪರ್ವ’ ಆರಂಭವಾಗುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹರಿಯಾಣದಲ್ಲಿ ಇಂತಹ ನಿರ್ಧಾರ ಕೈಗೊಂಡದ್ದು ಇದೇ ಪ್ರಥಮ ಎಂದು ಹೇಳಲಾಗಿದೆ.

ರಾಜ್ಯಾದ್ಯಂತ ನಗರಸಭೆ, ನಗರ ಪಾಲಿಕೆಗಳು ಶುಕ್ರವಾರದಿಂದಲೇ ಪ್ರಾಣಿವಧೆ ನಿಷೇಧ ಜಾರಿಗೆ ಕ್ರಮ ಕೈಗೊಂಡಿವೆ. ಆದರೆ ಧಾಬಾ ಮಾಲೀಕರು, ಮಾಂಸ ಮತ್ತು ಕೋಳಿ ಮಾರಾಟಗಾರರು, ಪ್ರಾಣಿ/ ಪಕ್ಷಿ ವಧಾಕಾರರು ಸರ್ಕಾರದ ಕ್ರಮವನ್ನು ಪ್ರತಿಭಟಿಸಿದ್ದಾರೆ.

ಕೆಲ ದಿನಗಳ ಹಿಂದೆ ಜೈನ ಸಮುದಾಯದ ನಿಯೋಗವೊಂದು ನಗರ ಸ್ಥಳೀಯ ಸಚಿವ ಕವಿತಾ ಜೈನ್ ಅವರನ್ನು ಭೇಟಿ ಮಾಡಿ ’ಪರ್ಯೂಷಣ ಪರ್ವ’ ಕಾಲದಲ್ಲಿ ವಧಾಲಯಗಳನ್ನು ಮುಚ್ಚುವಂತೆ ಮನವಿ ಮಾಡಿತ್ತು. ಆ ಬಳಿಕ ಜೈನ್ ಅವರು ಉತ್ಸವ ಅವಧಿಯಲ್ಲಿ ವಧಾಲಯಗಳನ್ನು ಮುಚ್ಚುವಂತೆ ಅವುಗಳ ಮಾಲೀಕರಿಗೆ ಮನವಿ ಮಾಡುವಂತೆ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಈ ನಿಟ್ಟಿನಲ್ಲಿ ಯಾವುದೇ ಆದೇಶವನ್ನು ಹೊರಡಿಸಿರಲಿಲ್ಲ.

Write A Comment