ಅಂತರಾಷ್ಟ್ರೀಯ

ಕ್ಯಾಲಿಫೋರ್ನಿಯ: ಭಾರತೀಯ ಸಂಜಾತೆ: ಮೊದಲ ಮಹಿಳಾ ಪೋಸ್ಟ್‌ಮಾಸ್ಟರ್

Pinterest LinkedIn Tumblr

33grewal-pic-e1441810121698ಲಾಸ್‌ಏಂಜಲೀಸ್, ಸೆ. 10: ಭಾರತೀಯ ಮೂಲದ ಅಮೆರಿಕನ್ ಮಹಿಳೆ ಜಗ್‌ದೀಪ್ ಗ್ರೆವಾಲ್(57) ಕ್ಯಾಲಿಫೋರ್ನಿಯದ ಸಾಕ್ರಮೆಂಟೊದ ಪೋಸ್ಟ್‌ಮಾಸ್ಟರ್ ಆಗಿ ನೇಮಕಗೊಂಡಿದ್ದು, ಕಳೆದ 166 ವರ್ಷಗಳ ಇತಿಹಾಸದಲ್ಲೇ ನೇಮಕಗೊಂಡಿರುವ ಮೊತ್ತ ಮೊದಲ ಮಹಿಳಾ ಪೋಸ್ಟ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗ್ರೆವಾಲ್ ಸೆಪ್ಟಂಬರ್ 3ರಂದು ಸಾಕ್ರಮೆಂಟೊದ ಮೊದಲ ಮಹಿಳಾ ಪೋಸ್ಟ್‌ಮಾಸ್ಟರ್ ಆಗಿ ಅಧಿಕಾರ ವಹಿಸಿಕೊಂಡಿರುವುದಾಗಿ ಅಮೆರಿಕದ ಅಂಚೆ ಸೇವೆಗಳ ಇಲಾಖೆ ತಿಳಿಸಿದೆ.

ಗ್ರೆವಾಲ್ 537 ನಗರ ವಲಯ ಹಾಗೂ 94 ಗ್ರಾಮೀಣ ವಲಯಗಳ 1,004 ಉದ್ಯೋಗಿಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಗೋಲ್ಡ್ ರಶ್ ಹಾಗೂ ಪೋನಿ ಎಕ್ಸ್‌ಪ್ರೆಸ್ ಕಾಲದಿಂದಲೂ ಸಾಕ್ರಮೆಂಟೊದಲ್ಲಿ ಅಂಚೆ ಸೇವೆಗಳು ನಿರ್ವಹಿಸಲ್ಪಡುತ್ತಿದ್ದರೂ, ಇದುವರೆಗೂ ಯಾವುದೇ ಮಹಿಳೆಯು ಪೋಸ್ಟ್ ಮಾಸ್ಟರ್ ಆಗಿ ನೇಮಕಗೊಂಡಿರಲಿಲ್ಲ. ಗ್ರೆವಾಲ್ 1988ರಲ್ಲಿ ಗುಮಾಸ್ತೆಯಾಗಿ ಅಂಚೆ ಇಲಾಖೆಯ ಸೇವೆ ಪ್ರಾರಂಭಿಸಿದ್ದರು.

Write A Comment