ಅಂತರಾಷ್ಟ್ರೀಯ

ಝುಂಪಾ ಲಾಹಿರಿಗೆ ಅಮೆರಿಕದ ರಾಷ್ಟ್ರೀಯ ಮಾನವತಾ ಪದಕ

Pinterest LinkedIn Tumblr

22-Jhumpa-Lahiri-008ವಾಷಿಂಗ್ಟನ್, ಸೆ.10: ಪುಲಿಟ್ಝರ್ ಪ್ರಶಸ್ತಿ ವಿಜೇತೆ ಭಾರತೀಯ ಅಮೆರಿಕನ್ ಝುಂಪಾ ಲಾಹಿರಿಯವರಿಗೆ ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ಮಾನವತಾ ಪದಕ ಲಭಿಸಿದೆ.
ಪದಕ ಪ್ರದಾನವು ಶ್ವೇತಭವನದಲ್ಲಿ ಶುಕ್ರವಾರ ಬೆಳಗ್ಗೆ ನಡೆಯಲಿದ್ದು, ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮ ಕೂಡಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಝುಂಪಾ ಲಾಹಿರಿಯವರು ತನ್ನ ಕೃತಿಗಳಲ್ಲಿ ಭಾರತೀಯ ಅಮೆರಿಕನ್ ಅನುಭವವನ್ನು ಮನಮುಟ್ಟುವಂತೆ ಸುಂದರವಾಗಿ ನಿರೂಪಿಸಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ಶ್ವೇತಭವನ ತಿಳಿಸಿದೆ.
ಲಾಹಿರಿಯವರ ಚೊಚ್ಚಲ ಸಣ್ಣಕಥಾ ಸಂಕಲನ ‘ಇಂಟರ್‌ಪ್ರಿಟನ್ ಆಫ್ ಮ್ಯಾಲಡೀಸ್’ ಕೃತಿಯು 2000ದಲ್ಲಿ ಕಾದಂಬರಿ ವಿಭಾಗದಲ್ಲಿ ಪುಲಿಟ್ಝರ್ ಬಹುಮಾನ ಪಡೆದಿತ್ತು.
ಝಂಪಾ ಲಾಹಿರಿಯವರಿಗೆ ಮಾತ್ರವಲ್ಲದೆ ಮಾನವತಾ ಸೇವೆಗಳಿಗಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶುಕ್ರವಾರ ಇತರ ಕೆಲವರಿಗೂ ಪದಕಗಳನ್ನು ಪ್ರದಾನಿಸಲಿದ್ದಾರೆ.
ಈ ಪದಕವನ್ನು 1996ರಿಂದ ಪ್ರತಿವರ್ಷ ನೀಡಲಾಗುತ್ತಿದೆ. ಅಂದಿನಿಂದ ಇದುವರೆಗೆ ಒಟ್ಟು 163 ವ್ಯಕ್ತಿಗಳಿಗೆ ಹಾಗೂ 12 ಸಂಘಟನೆಗಳಿಗೆ ಈ ಪುರಸ್ಕಾರ ನೀಡಲಾಗಿದೆ.

Write A Comment