ಅಂತರಾಷ್ಟ್ರೀಯ

ಚೀನಾ ಸೇನೆಯ 1.7 ಲಕ್ಷ ಅಧಿಕಾರಿಗಳಿಗೆ ಕೊಕ್?

Pinterest LinkedIn Tumblr

officerಬೀಜಿಂಗ್, ಸೆ. 5: ತನ್ನ 23 ಲಕ್ಷ ಬಲದ ಸೇನೆಯ ಗಾತ್ರವನ್ನು ಕಡಿತ ಮಾಡಲು ಮುಂದಾಗಿರುವ ಚೀನಾ, ಸುಮಾರು 1.70 ಲಕ್ಷ ಅಧಿಕಾರಿಗಳಿಗೆ ನಿವೃತ್ತಿ ನೀಡಲಿದೆ. ಪ್ರಪಂಚದ ಅತ್ಯಂತ ದೊಡ್ಡ ಸೇನೆಯು ಈಗ ಅಸ್ತಿತ್ವದಲ್ಲಿರುವ ತನ್ನ ಏಳು ಕಮಾಂಡ್‌ಗಳ ಪೈಕಿ ಎರಡು ಕಮಾಂಡ್‌ಗಳು ಹಾಗೂ ಮೂರು ಕಾರ್ಪ್ಸ್‌ಗಳನ್ನು ರದ್ದುಪಡಿಸಲು ಚಿಂತನೆ ನಡೆಸಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಗಾತ್ರವನ್ನು ತಗ್ಗಿಸಿ ದಕ್ಷತೆಯನ್ನು ಹೆಚ್ಚಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರೂಪಿಸಿರುವ ಯೋಜನೆಯಲ್ಲಿ ಒಟ್ಟು 3 ಲಕ್ಷ ಸಿಬ್ಬಂದಿಗೆ ನಿವೃತ್ತಿ ನೀಡುವ ಪ್ರಸ್ತಾಪವಿದೆ. ಆ ಪೈಕಿ 1.5 ಲಕ್ಷಕ್ಕೂ ಅಧಿಕ ಮಂದಿ ಅಧಿಕಾರಿಗಳಾಗಿರುತ್ತಾರೆ ಎಂದು ಹಾಂಕಾಂಗ್‌ನ ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ಸೇನಾ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಚೀನಾದ ಭೂಸೇನೆಯಲ್ಲಿ ಲೆಫ್ಟಿನೆಂಟ್‌ನಿಂದ ಹಿಡಿದು ಕರ್ನಲ್‌ವರೆಗಿನ ಕನಿಷ್ಠ 1.7 ಲಕ್ಷ ಅಧಿಕಾರಿಗಳಿಗೆ ನಿವೃತ್ತಿ ನೀಡಲಾಗುವುದು ಹಾಗೂ ಈಗಿರುವ ಏಳು ಕಮಾಂಡ್‌ಗಳ ಪೈಕಿ ಎರಡು ಕಮಾಂಡ್‌ಗಳು ಮತ್ತು ಮೂರು ಸೇನಾ ಕಾರ್ಪ್ಸ್‌ಗಳನ್ನು ರದ್ದುಪಡಿಸಲಾಗುವುದು.

ಅವರಿಗೆ ಅವಧಿಪೂರ್ವ ನಿವೃತ್ತಿಯ ಸೌಲಭ್ಯಗಳನ್ನು ಕೊಡಲಾಗುವುದು. ಪ್ರತಿ ಸೇನಾ ಕಮಾಂಡ್ ಎರಡರಿಂದ ಮೂರು ಸೇನಾ ಕಾರ್ಪ್ಸ್‌ಗಳನ್ನು ಹೊಂದಿವೆ ಹಾಗೂ ಪ್ರತಿ ಕಾರ್ಪ್ಸ್‌ನಲ್ಲಿ 30,000ದಿಂದ 50,000 ಸೈನಿಕರಿರುತ್ತಾರೆ. ಎರಡು ಕಮಾಂಡ್‌ಗಳನ್ನು ರದ್ದುಪಡಿಸುವುದೆಂದರೆ ಸುಮಾರು 1.2 ಲಕ್ಷ ಸೈನಿಕರನ್ನು ಕಳೆದುಕೊಂಡಂತೆ.

Write A Comment