ಅಂತರಾಷ್ಟ್ರೀಯ

ತೆರಿಗೆ ಹೆಚ್ಚಿಸದೆ ನಿರಾಶ್ರಿತರ ವಲಸೆಯನ್ನು ನಿಭಾಯಿಸಬಹುದು: ಜರ್ಮನ್ ಚಾನ್ಸಲರ್

Pinterest LinkedIn Tumblr

engelಬರ್ಲಿನ್, ಸೆ. 5: ತೆರಿಗೆಗಳನ್ನು ಹೆಚ್ಚಿಸದೆ ಹಾಗೂ ಸಮತೋಲಿತ ಬಜೆಟ್‌ನ ಗುರಿಯೊಂದಿಗೆ ರಾಜಿಮಾಡಿಕೊಳ್ಳದೇ ದಾಖಲೆ ಸಂಖ್ಯೆಯ ನಿರಾಶ್ರಿತರ ವಲಸೆಯನ್ನು ಜರ್ಮನಿ ನಿಭಾಯಿಸಬಹುದಾಗಿದೆ ಎಂದು ಆ ದೇಶದ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಹೇಳಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಜರ್ಮನಿಯು ಉದಾರ ಆಶ್ರಯ ಕಾನೂನುಗ ನ್ನು ಹೊಂದಿದೆ ಹಾಗೂ ನಿರಾಶ್ರಿತರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುತ್ತದೆ. ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಆಗ್ನೇಯ ಯುರೋಪ್‌ನ ಆರ್ಥಿಕ ಸಂಕಷ್ಟದಿಂದ ಪಾರಾಗಿ ಬರುವ ನಿರಾಶ್ರಿತರಿಗೆ ಅದು ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯನೀಡಿದೆ.

ಯುರೋಪ್‌ನ ಅತ್ಯಂತ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಜರ್ಮನಿಯನ್ನು ಆಗಸ್ಟ್‌ನಲ್ಲಿ ದಾಖಲೆಯ 1,04,460 ನಿರಾಶ್ರಿತರು ಪ್ರವೇಶಿಸಿದ್ದಾರೆ. ಈ ವರ್ಷ ದೇಶಕ್ಕೆ ಸುಮಾರು 8 ಲಕ್ಷ ನಿರಾಶ್ರಿತರು ಮತ್ತು ವಲಸಿಗರು ಬರಬಹುದು ಎಂಬ ನಿರೀಕ್ಷೆಯನ್ನು ಅದು ಹೊಂದಿದೆ. ಇದು ಕಳೆದ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚು.

ನಿರಾಶ್ರಿತರ ವಾಸಕ್ಕಾಗಿ, ನಿರಾಶ್ರಿತರ ವಾಸದ ವೆಚ್ಚವನ್ನು ಭರಿಸಲು ಪರದಾಡುತ್ತಿರುವ ಪಟ್ಟಣಗಳಿಗೆ ನೆರವು ನೀಡುವುದಕ್ಕಾಗಿ ಹಾಗೂ ಹೊಸದಾಗಿ ಬಂದಿರುವವರ ವೈದ್ಯಕೀಯ ಚಿಕಿತ್ಸೆಗಾಗಿ ಪೂರಕ ಬಜೆಟೊಂದನ್ನು ಮಂಡಿಸಲು ಸರಕಾರ ಉದ್ದೇಶಿಸಿದೆ.

‘‘ನಾವು ತೆರಿಗೆ ಹೆಚ್ಚಿಸುವುದಿಲ್ಲ. ಹೊಸ ಸಾಲಗಳನ್ನು ಪಡೆದುಕೊಳ್ಳದೆ ಸಮತೂಲಿತ ಬಜೆಟೊಂದನ್ನು ಮಂಡಿಸುವ ಗುರಿಯನ್ನು ನಾವು ಈಗಲೂ ಹೊಂದಿದ್ದೇವೆ’’ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಶನಿವಾರ ಪ್ರಕಟಗೊಂಡ ಸಂದರ್ಶನದಲ್ಲಿ ಮರ್ಕೇಲ್ ಹೇಳಿದ್ದಾರೆ.

ಬರ್ಲಿನ್‌ನ ಸುಲಲಿತ ಬಜೆಟ್ ಸ್ಥಿತಿಗತಿ ಇಂಥ ಅನಿರೀಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದ ಮರ್ಕೆಲ್, ನಿರಾಶ್ರಿತ ಬಿಕ್ಕಟ್ಟು ಶಮನ ಈಗ ಸರಕಾರದ ಆದ್ಯತೆಯಾಗಿದೆ ಎಂದರು.

Write A Comment