ಅಂತರಾಷ್ಟ್ರೀಯ

ಸರ್ಕಾರೀ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡಿದ ಇಸಿಸ್ ಉಗ್ರರು !

Pinterest LinkedIn Tumblr

webತಮ್ಮ ಕೃತ್ಯಗಳಿಂದ ಜಗತ್ತಿಗೆ ಸವಾಲೆನಿಸಿರುವ ಇಸಿಸ್ ಉಗ್ರರು ಇದೀಗ ಥೈಲ್ಯಾಂಡ್‌ ಸರಕಾರದ ಆಧೀನದಲ್ಲಿರುವ ಆರು ಸರಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಥೈಲ್ಯಾಂಡ್‌ ಸರಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ ಟುನೇಶಿಯಾದಲ್ಲಿರುವ ಫಾಲ್ಲಾಗ್‌ ಗಸ್ಸರಿನ್‌ ಹಾಗೂ ಡಾ. ಲಾಮೌಚಿ ಎಂಬ ಇಸಿಸ್‌ ಉಗ್ರ ಸಂಘಟನೆಯ ನಾಯಕರು, ತಮ್ಮ ಉಗ್ರ ಸಂಘಟನೆಗೆ ಬೆಂಬಲಿಸಬೇಕು, ನಾವು ಫಾಲ್ಲಾಗ್‌ ತಂಡದವರು ನಾವು ಶಾಂತಿ ಬಯಸುವವರು ಎಂದ ಸಂದೇಶವನ್ನು ರವಾನಿಸಿರುವುದರ ಜತೆಗೆ ಹ್ಯಾಕ್‌ ಮಾಡಲಾದ ವೆಬ್‌ಸೈಟ್‌ಗಳಲ್ಲಿ ಶೋಷಣೆಗೆ ಒಳಗಾಗಿರುವ ಮ್ಯಾನ್ಮಾರ್‌ ರೋಹಿಂಗ್ಯ ಮುಸ್ಲಿಂ ಪಂಗಡದ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಈಗಾಗಲೇ ಇಸ್ರೇಲ್ ಮತ್ತು ಫ್ರೆಂಚ್‌ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದ ಉಗ್ರರು ಇದೀಗ ಥೈಲ್ಯಾಂಡ್‌ ಸರಕಾರದ ವೆಬ್ ಸೈಟ್ ಗಳನ್ನೂ ಸಹ ಹ್ಯಾಕ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದ್ದು ಇಷ್ಟು ದಿನ ರಕ್ತ ಹರಿಸುವ ಮೂಲಕ ಕ್ರೌರ್ಯ ಪ್ರದರ್ಶಿಸುತ್ತಿದ್ದ ಈ ಉಗ್ರರು ಅಂತರ್ಜಾಲ ವ್ಯವಸ್ಥೆಯನ್ನು ಹಾಳುಗೆದವುದರ ಜತೆಗೆ ಮಾಹಿತಿಗಳನ್ನು ಕದಿಯುತ್ತಿರುವುದೂ ಸಹ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Write A Comment