ಅಂತರಾಷ್ಟ್ರೀಯ

108 ವರ್ಷದಷ್ಟು ಹಳೆಯ ಬಾಟಲ್ ಸಂದೇಶ ಪತ್ತೆ: ಅಮ್ರುಮ್ ದ್ವೀಪದಲ್ಲಿ ಪತ್ತೆಯಾಯ್ತು ಜಗತ್ತಿನ ಹಳೆಯ ಸಂದೇಶ

Pinterest LinkedIn Tumblr

bottleಲಂಡನ್: ಜರ್ಮನಿಯ ಅಮ್ರುಮ್ ದ್ವೀಪದಲ್ಲಿ ಹಳೆಯ ಬಾಟಲೊಂದು ಸಿಕ್ಕಿದೆ. ಹಳೆಯ ಬಾಟಲ್ ಸಿಕ್ಕುವುದು ವಿಶೇಷವೇನಲ್ಲ.

ಅದರಲ್ಲೊಂದು ಸಂದೇಶಪತ್ರ ಇರುವುದು ಪತ್ತೆಯಾಗಿದೆ. ಅದೂ ವಿಶೇಷ ಅಲ್ಲ ಅನ್ನೋದಾದ್ರೆ ಕೇಳಿ. ಅದು 108 ವರ್ಷ ಹಳೆಯದು. ಸಮುದ್ರದಲ್ಲಿ ಒಂದು ಸುತ್ತು ಪ್ರಯಾಣ ಮುಗಿಸಿ ದ್ವೀಪಕ್ಕೆ ವಾಪಸಾಗಿದೆ! ಇದು ಅಚ್ಚರಿಯೇ ತಾನೆ?

ಈ ಸಂದೇಶಪತ್ರವನ್ನು ಜಗತ್ತಿನ ಅತ್ಯಂತ ಹಳೆಯ ಪತ್ರ ಎಂದು ಪರಿಗಣಿಸಲಾಗಿದ್ದು, ಇದು ಸಿಕ್ಕಿರುವುದು ಜರ್ಮನಿಯ ನಿವೃತ್ತ ಪೋಸ್ಟ್ ಆಫೀಸ್ ನೌಕರರೊಬ್ಬರಿಗೆ. ಕಳೆದ ಏಪ್ರಿಲ್ ನಲ್ಲಿ ಮೇರಿಯನ್ ವಿಂಕ್ಲರ್‍ಗೆ ಸಿಕ್ಕಿದ ಈ ಪತ್ರ ಬಾಟಲ್ ನಿಂದ ಹೊರತೆಗೆಯಲಾಗದೆ ಒಡೆಯುವುದು ಅನಿವಾರ್ಯವಾಯಿತು ಎಂದು ಟೆಲಿಗ್ರಾಫ್ ಪತ್ರಿಕೆಯಲ್ಲಿ ವರದಿಯಾಗಿದೆ. 1904ರ ಹೊತ್ತಿನ ಈ  ಪತ್ರದ ಮೇಲೆ ಬ್ರಿಟನ್‍ನ ಪ್ಲೈಮೌಥ್ ವಿಳಾಸ ಬರೆಯಲಾಗಿದ್ದು, ಪತ್ರ ತಲುಪದೇ ಹೋದಲ್ಲಿ ಈ ವಿಳಾಸಕ್ಕೆ ವಾಪಸ್ ಮಾಡಬೇಕೆಂದು ಬರೆದಿದ್ದಾರೆ. ಈ ಬಾಟಲ್ ಪತ್ರ ಕೊಡಲು ಪೋಸ್ಟ್  ಆಫೀಸ್ ನೌಕರ ದಂಪತಿ ನಿರಾಕರಿಸಿದ್ದಾರೆ.

Write A Comment