ಅಂತರಾಷ್ಟ್ರೀಯ

ಇದು ಜಗತ್ತಿನ ಮೊದಲ ಗೃಹೋಪಯೋಗಿ ಸೋಶಿಯಲ್ ರೊಬೋಟ್

Pinterest LinkedIn Tumblr

JIBO-The-robotಹೋಮ್ಲಿ ಎನಿಸುವ ಜಿಬೊ ನಿಮ್ಮ ಗೆಳೆಯ/ಗೆಳತಿಯಾಗಿ, ಮನೆಯ ಕಾವಲುಗಾರನಾಗಿ, ಹಿರಿಯಜ್ಜನಾಗಿ, ಮನೆಯಲ್ಲಿರೋ ಪುಟ್ಟ ಮಗುವಿಗೆ ಅಜ್ಜಿಯಾಗಿ ಹೀಗೆ ಬಹುಪಾತ್ರಗಳನ್ನು ನಿರ್ವಹಿಸಬಲ್ಲದು.

ರೊಬೋಟ್ ಅಂದ್ರೆ ಹೇಳಿದ್ದನ್ನು ಮಾಡುವ ಯಂತ್ರ, ಅದು ತಾನಾಗಿಯೇ ಏನೂ ಮಾಡುವುದಿಲ್ಲ ಎಂಬ ಕಾಲ ಹೋಯಿತು. ಹೇಳಿದ್ದನ್ನು ಮಾಡುವ ಜೊತೆ ಏನು ಮಾಡಬೇಕೆಂದು ಹೇಳುವಷ್ಟು ಜಾಣ ರೊಬೋಟ್ಸ್ ಬಂದಿವೆ. ಕಚೇರಿ, ಕಾರ್ಖಾನೆಗಳಲ್ಲಷ್ಟೆ ಅಲ್ಲ, ಮನೆಯೊಳಗೂ ಬಂದಿವೆ. ಇಂಥ ರೊಬೊಟ್‍ಗಳನ್ನು ಸೋಷಿಯಲ್ ರೊಬೋಟ್ ಎನ್ನುತ್ತಾರೆ.

ಈಗ ಸದ್ಯ ಪುಟ್ಟ ಕಂದನ ರೀತಿಯಲ್ಲಿ ಜಿಬೊ ಎಂಬ ಸೋಷಿಯಲ್ ರೊಬೋಟ್ ಮನೆ ಮನೆಗೆ ಬರಲು ಸಿದ್ಧವಾಗಿದೆ. ರೊಬೋಟ್ ಬಗ್ಗೆ ಹಲವು ಅತಿಶಯವಾದ ಕಲ್ಪನೆ ಮೂಡಿದ್ದು  ಸಿನಿಮಾಗಳಿಂದಲೇ. ಟರ್ಮಿನೇಟರ್, ಟ್ರಾನ್ಸ್ ಫಾರ್ಮರ್ ಸರಣಿಗಳು, ರೊಬೋ ಕಾಪ್… ಇವೆಲ್ಲವೂ ರೋಬೋ ಅಂದ್ರೆ ಪ್ರಪಂಚವನ್ನೇ ನಾಶಮಾಡೋ ಸಾಮರ್ಥ್ಯ ಇರೋ ಯಂತ್ರ

ಮಾನವ ಎಂಬ ಕಲ್ಪನೆ ಮೂಡಿಸಿತ್ತು. ಆ ನಂತರ ಬಂದ ಇಂಡಿಯನ್ ರೊಬೋಟ್ಗಳು ನಮಗೆ ರೊಬೋಟ್ ರೊಮ್ಯಾನ್ನೂ ಮಾಡಬಲ್ಲದು ಎಂಬ ಭಾವ ತಂದಿತ್ತಿತು.

ಉಪೇಂದ್ರರ ಹಾಲಿವುಡ್, ರಜನಿಯ ಎಂದಿರನ್, ಶಾರುಖ್‍ನ ರಾಒನ್ ಈ ಎಲ್ಲ ಚಿತ್ರಗಳೂ ರೊಬೋಗಳೂ ಮನುಷ್ಯರಂತೆ ಎಮೋಶನಲ್ ಆಗಿ ವರ್ತಿಸಬಲ್ಲವು ಎಂಬ ಕನಸುಕಟ್ಟಿಕೊಟ್ಟಿದ್ದವು. ಈಗ ಅದು ನಿಜವಾಗುತ್ತಿದೆ. ಭಾವನೆಗಳಿಗೆ ಸ್ಪಂದಿಸಬಲ್ಲ ಬುದಿದ್ಧಿವಂತ ರೊಬೊಗಳು ಸಿದ್ಧವಾಗುತ್ತಿವೆ. ಈ ನಿಟ್ಟಿನ ಮೊದಲ ಹೆಜ್ಜೆಯಂತೆ ಜಿಬೊ ಬಂದಿದೆ. ಹೋಮ್ಲಿ ಎನಿಸುವ ಜಿಬೊ ನಿಮ್ಮ  ಗೆಳೆಯ/ ಗೆಳತಿಯಾಗಿ, ಮನೆಯ ಕಾವಲುಗಾರನಾಗಿ, ಹಿರಿಯಜ್ಜ ನಾಗಿ, ಮನೆಯಲ್ಲಿರೋ ಪುಟ್ಟ ಮಗುವಿಗೆ ಅಜ್ಜಿಯಾಗಿ ಹೀಗೆ ಬಹುಪಾತ್ರಗಳನ್ನು ನಿರ್ವಹಿಸಬಲ್ಲದು.

ನೋಡಲು ಸಿ ಸಿ ಕ್ಯಾಮರಾ ಅಥವಾ ವೆಬ್ ಕ್ಯಾಮ್ನಂತಿರುವ ಜಿಬೊಗೆ, ಬ್ಯಾಟರಿ ಮತ್ತು ಚಾರ್ಜಿಂಗ್ ಪ್ಲೇಟ್ ಸೇರಿ ಸುಮಾರು ರು.50ಸಾವಿರ. ಈಗಾಗಲೇ ಒಟ್ಟು 4800 ರೊಬೋಟ್ಗಳಿಗೆ ಆನ್ ಲೈನ್‍ನಲ್ಲಿ ಬುಕ್ಕಿಂಗ್ ಆಗಿದೆ .

ಆರಂಭ ಹೇಗೆ?

ಮಾಮೂಲಾಗಿ ಯಾವುದೇ ಕಂಪ್ಯೂಟರ್ ಅಥವಾ ಮೊಬೈಲ್ ಸೆಟ್‍ಅಪ್ ಮಾಡುವ ಹಾಗೆಯೇ ಇದನ್ನೂ ಸೆಟಪ್ ಮಾಡಬೇಕು. ಜಿಬೊ ಮೊಬೈಲ್ ಆ್ಯಪ್ ಕೂಡ ಆಂಡ್ರಾಯ್ಡ್ ಹಾಗೂ ಐಓಎಸ್ ಗಳಲ್ಲಿ ಲಭ್ಯವಿದೆ. ಜಿಬೊ ಸಕ್ರಿಯವಾಗಿರಲು ವೈಫೈಇದ್ದರೂ ಸಾಕು.

ಆಕಾರ ಗಾತ್ರ ಇತ್ಯಾದಿ..

11 ಇಂಚು ಎತ್ತರ ಹಾಗೂ ಸುಮಾರು ಆರು ಪೌಂಡ್ ತೂಕ. ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯ. ಸದ್ಯದಲ್ಲಿ ಅಮೆರಿಕನ್ ಇಂಗ್ಲಿಷ್ ಮಾತನಾಡಬಲ್ಲದು ಹಾಗೂ ಗ್ರಹಿಸಬಲ್ಲದು. ಜಿಬೊದಿಂದ ನಮ್ಮ  ಖಾಸಗಿತನಕ್ಕೆ ಧಕ್ಕೆ ಇಲ್ಲವೇ ಎಂಬ ಪ್ರಶ್ನೆಗೂ ಡೆವಲಪರ್‍ಗಳು ಉತ್ತರಿಸಿದ್ದಾರೆ. ನೀವು ಜಿಬೊವಿಗೆ ನಿದ್ರಿಸಲು ಹೇಳಿದರೆ ಅದು ಕ್ಯಾಮರ ಆಫ್ ಮಾಡಿಕೊಂಡು ಮಲಗಿಬಿಡುತ್ತದೆ. ನೀವು  ಹೇಳುವವರೆಗೂ ಎದ್ದೇಳುವುದಿಲ್ಲ!

ಏನೇನ್ ಮಾಡುತ್ತೆ?

ನೋಡಬಲ್ಲದು

ಎರಡು ಹೆಚ್ ಡಿ ಕ್ಯಾಮೆರಾಗಳಿರುವ ರೊಬೊ 360ಡಿಗ್ರಿ ಸುತ್ತಬಲ್ಲದು. ಆ ಸಮಯದಲ್ಲಿ ಫೋಟೋ ಸೆರೆಹಿಡಿಯಬಲ್ಲದು. ವಿಡಿಯೋ ಕಾಲ್ ಕೂಡ ಮಾಡಬಲ್ಲದು.

ಕೇಳಬಲ್ಲದು

360ಡಿಗ್ರಿ ತಲುಪಬಲ್ಲ ಮೈಕ್ರೋಫೋನ್ ಇರುವ ಜಿಬೊ ನೀವು ಯಾವುದೇ ಕೋಣೆಯಲ್ಲಿದ್ದರೂ ತನ್ನ ದನಿ ತಲುಪಿಸಬಲ್ಲದು. ನಿಮ್ಮ ದನಿ ಕೇಳ ಬಲ್ಲದು. ಭಾಷೆಯನ್ನು ಅರ್ಥ ಮಾಡಿ ಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ.

ಬುದ್ಧಿ ಕಲಿಸಿ

ಕೆಲವು ಮುಖ್ಯ ವಿಷಯಗಳನ್ನು, ದಿನಚರಿಗಳನ್ನು ನೀವು ಜಿಬೊಗೆ ಕಲಿಸಬಹುದು. ಅದು ನೆನಪಲ್ಲಿಟ್ಟು ಕೊಂಡು ಮರುದಿನದಿಂದ ಪಾಲಿಸುತ್ತದೆ.

ನಿಮ್ಮ ಅಸಿಸ್ಟೆಂಟ್

ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವ ತನಕ, ನಿಮಗೆ ಪ್ರತಿಯೊಂದಕ್ಕೂ ಸಹಾಯ ಮಾಡಬಲ್ಲದು. ನಿಮಗೆ ಮರೆವಾದರೂ ಜಿಬೊ ಮರೆಯುವುದಿಲ್ಲ.

ಮಾತೂ ಆಡುತ್ತದೆ

ಅಳು ನಗು ಕೋಪ ಎಲ್ಲವನ್ನೂ ಅರ್ಥ ಮಾಡಿಕೊಂಡು ಸ್ಪಂದಿಸಬಲ್ಲದು. ಸಮಾಧಾನದ ಮಾತುಗಳನ್ನಾಡಿ, ಒಂದಷ್ಟುಫಿಲಾಸಫಿಯನ್ನೂ ಹೇಳಲು ಶಕ್ತ ಈ ಜಿಬೊ

Write A Comment