ಅಂತರಾಷ್ಟ್ರೀಯ

ಮನೆಯಲ್ಲಿದ್ದ 231 ಡೈನೋಸರ್ ಮೊಟ್ಟೆಗಳು ಚೀನಾ ಪೊಲೀಸರು ವಶ

Pinterest LinkedIn Tumblr

dinosaur egg

ಬೀಜಿಂಗ್: ಮನೆಯೊಂದರಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಡೈನೋಸರ್ ಮೊಟ್ಟೆಗಳ ಜೊತೆಗೆ ಡೈನೋಸರ್ ಅಸ್ಥಿಗಳನ್ನು ಚೀನಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 29ರಂದು ಮಾಹಿತಿ ಮೇರೆಗೆ ದಕ್ಷಿಣ ಚೀನಾದ ಹೆಯಾನ್ ನಗರದ ಗುವಾನ್‍ಡೊಂಗ್ ಪ್ರಾಂತ್ಯದಲ್ಲಿ ಪೊಲೀಸರು ಮನೆಯೊಂದರ ಮೇಲೆ ದಾಳಿ ಮಾಡಿ ಬರೋಬ್ಬರಿ 231 ಡೈನೋಜರ್ ಮೊಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಪರೀಕ್ಷೆಯ ನಂತರ ಸಿಟ್ಟಾಕೊಸೋರಸ್ ಎಂಬ ಈ ಡೈನೋಸರ್ ಆಕ್‍ಸ್ಟಿಂಕ್ಟ್ ಕೆರ್ಟೋಪ್ಸಿಯನ್ ಜಾತಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಚೀನಾದ ಈ ಹೆಯಾನ್ ಸಿಟಿ ಒಂದು ಕಾಲದಲ್ಲಿ ಡೈನೋಸರ್‍ಗಳ ತಾಣವಾಗಿತ್ತು ಹೇಳಲಾಗುತ್ತಿದೆ. ಹೀಗಾಗಿ ಕಟ್ಟಡ ನಿರ್ಮಾಣಗಳನ್ನು ಮಾಡುವಾಗ ಜೂನ್‍ನಲ್ಲಿ ಹಾಗೂ ಜುಲೈ 28ರಂದು ಡೈನೋಸರ್ ಮೊಟ್ಟೆಗಳು ಪತ್ತೆಯಾಗಿದ್ದವು. ಅಪರೂಪಕ್ಕೆ ಸಿಕ್ಕಿದ್ದ ಮೊಟ್ಟೆಗಳನ್ನು ಇಲ್ಲಿನ ನಿವಾಸಿಗಳು ಇಟ್ಟುಕೊಂಡಿದ್ದರು. ಆದರೆ ಪೊಲೀಸರು ತನಿಖೆ ನಡೆಸಿ ಮೊಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ.

2 Comments

Write A Comment