ಅಂತರಾಷ್ಟ್ರೀಯ

ಗರ್ಭ ಧರಿಸಿ 60 ವರ್ಷವಾದರೂ ಆಕೆಗೆ ಗೊತ್ತೇ ಆಗಿಲ್ಲ !

Pinterest LinkedIn Tumblr

garbaವಾಷಿಂಗ್ಟನ್: ಮಹಿಳೆಯರಿಗೆ ವಾಂತಿ ಸೇರಿದಂತೆ ಮೊದಲಾದ ತಮ್ಮಲ್ಲಾಗುವ ಬದಲಾವಣೆಗಳಿಂದ ತಾವು ಗರ್ಭವತಿಯಾಗಿರಬಹುದು ಎನಿಸುತ್ತದೆ. ಅಲ್ಲದೇ ಅದು ಸಹಜ ಕೂಡ. ಇಲ್ಲೊಬ್ಬ ಮಹಿಳೆ ಗರ್ಭ ಧರಿಸಿ 60 ವರ್ಷ ಕಳೆದರೂ ಆಕೆಗೆ ಗೊತ್ತೇ ಆಗಿಲ್ಲ.

ಚಿಲಿ ಮೂಲದ ಈ ಮಹಿಳೆ ಹೆಸರು ಮೆಲೆಂಡೇಜ್. ಅಂದ ಹಾಗೆ ಆಕೆಗೀಗ 91 ವರ್ಷ ವಯಸ್ಸು. ಸುಮಾರು 74 ವರ್ಷಗಳ ಹಿಂದೆ ಮ್ಯಾನ್ಯುಲ್ ಗೊನ್ಜಲೆಜ್ ಎಂಬಾತನನ್ನು ಮದುವೆಯಾಗಿದ್ದ ಆಕೆಗೆ ಮಕ್ಕಳಾಗಿರಲಿಲ್ಲ. ಕಳೆದ ವರ್ಷ ಪತಿ ಮೃತಪಟ್ಟಿದ್ದರು. ಮಕ್ಕಳಾಗಲಿಲ್ಲ ಎಂಬುದು ಈ ದಂಪತಿಯ ಕೊರಗಾಗಿತ್ತು.

ಇತ್ತೀಚೆಗೆ ಹೊಟ್ಟೆ ನೋವಿನ ಕಾರಣದಿಂದ ಈಕೆ ಸಂಕಟ ಅನುಭವಿಸುತ್ತಿದ್ದು, ಆಸ್ಪತ್ರೆಗೆ ಹೋಗಿದ್ದಾರೆ. ಹೊಟ್ಟೆಯಲ್ಲಿ ಗೆಡ್ಡೆ ಇರಬಹುದೆಂದು ಭಾವಿಸಿ ಅವರನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. 60 ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿ ಭ್ರೂಣ ಇರುವುದು ಗೊತ್ತಾಗಿದೆ. ಕೊನೆಗೆ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆದಿದ್ದಾರೆ.

Write A Comment