ಅಂತರಾಷ್ಟ್ರೀಯ

ಬಾಂಬ್ ಸ್ಪೋಟಕ್ಕೆ ಬೆಚ್ಚಿ ಬಿದ್ದ ಕಾಬೂಲ್

Pinterest LinkedIn Tumblr

kabulಕಾಬೂಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಇಲ್ಲಿನ ಟ್ರಕ್‌ನಲ್ಲಿ ಇರಿಸಿದ್ದ ಪ್ರಬಲ ಬಾಂಬ್‌ ಸ್ಪೋಟಗೊಂಡು ಏಳು ಮಂದಿ ಸ್ಥಳದಲ್ಲಿಯೀ ಸಾವನ್ನಪ್ಪಿ 400 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಸ್ಪೋಟದ ಪರಿಣಾಮ ಏಳು ಮಂದಿಯ ದೇಹ ಛಿದ್ರವಾಗಿದ್ದು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈಗಾಗಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಇಲ್ಲಿಯ ವರೆಗೂ ಯಾವುದೇ ಉಗ್ರ ಸಂಘಟನೆ ಕೃತ್ಯದ ಹೊಣೆಯನ್ನು ಹೊತ್ತಿಲ್ಲ . ಆದರೆ ಈ ಘಟನೆಯ ಹಿನ್ನೆಲೆಯಲ್ಲಿ ಯಾವುದೇ ಟ್ರಕ್‌ಗಳನ್ನು ನಗರದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment