ಭೂಕಂಪನದ ಅಬ್ಬರಕ್ಕೆ ತತ್ತರಿಸಿದ್ದ ನೇಪಾಳದಲ್ಲಿ ಇದೀಗ ವರುಣನ ಆರ್ಭಟ ಪ್ರಾರಂಭವಾಗಿದ್ದು ಹಲವೆಡೆ ಭೂ ಕುಸಿತ ಸಂಭವಿಸಿ 13ಮಹಿಳೆಯರೂ ಸೇರಿದಂತೆ 25 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಳೆಯ ಅಬ್ಬರಕ್ಕೆ ಕಸ್ಕಿ ಜಿಲ್ಲೆಯಲ್ಲಿಯೇ 19 ಮಂದಿ ಸಾವನ್ನಪ್ಪಿದರೆ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲ, ಹಲವಾರು ಮನೆಗಳು ಕುಸಿದಿದ್ದು ನೂರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಪ್ರವಾಸಿ ತಾಣ ಪೋಖ್ರಾದಲ್ಲಿಯೂ ಸಹ ವರುಣನ ಆರ್ಭಟಕ್ಕೆ ಸಾಕಷ್ಟು ಆಸ್ತಿ ಪಾಸ್ತಿ ನಷ್ಟವಾಗಿದ್ದು ಪೋಖ್ರಾ – ಬಗಲುಂಗ್ ಹೆದ್ದಾರಿ ನಾಶವಾಗಿದೆ.
ಈಗಾಗಲೇ ಸಂತ್ರಸ್ತರ ನೆರವಿಗೆ ರಕ್ಷಣಾ ಪಡೆ ಧಾವಿಸಿದ್ದು ಹೆಲಿಕಾಪ್ಟರ್ ಮೂಲಕ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಅಲ್ಲದೇ ಕೆಲವೆಡೆ ತಾತ್ಕಾಲಿಕ ಟೆಂಟ್ ಗಳನ್ನೂ ಸಹ ನಿರ್ಮಿಸಿ ಜನರಿಗೆ ವಸತಿ ಕಲ್ಪಿಸುವ ಕಾರ್ಯವೂ ನಡೆದಿದೆ.