ಮ್ಯಾಗ್ಸೆಸೆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ಐಎಫ್ಎಸ್ ಅಧಿಕಾರಿ ಸಂಜೀವ ಚತುರ್ವೇದಿ ಪ್ರಧಾನಿ ಮೋದಿ ಅವರ ವಿರುದ್ದ ಕಿಡಿ ಕಾರಿದ್ದು ಮೋದಿ ಅವರ ವರ್ತನೆ ಅವರ ಪ್ರಾಮಾಣಿಕತೆಯ ಕುರಿತಾಗಿ ಅನುಮಾನ ಮೂಡುವಂತಾಗಿದೆ ಎಂದು ತಿಳಿಸಿದ್ದಾರೆ.
ತಮಗೆ ಪ್ರಶಸ್ತಿ ಲಭಿಸಿದ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಚತುರ್ವೇದಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಕ್ಕೆ ದಿಲ್ಲಿಯ ಏಮ್ಸ್ ಆಸ್ಪತ್ರೆಯ ವಿಚಕ್ಷಣ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ್ದಾರ ಕುರಿತಾಗಿ ಕಿಡಿಕಾರಿದರಲ್ಲದೇ ‘ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ.ಆದರೆ ಅದಕ್ಕೆ ತಕ್ಕನಾಗಿ ವರ್ತಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.
ಮೋದಿ ಅವರ ಆಶಯದಂತೆಯೇ ಏಮ್ಸ್ನಲ್ಲಿನ ಭ್ರಷ್ಟಾಚಾರವನ್ನು ತಾವು ಬಯಲಿ ಗೆಳೆದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಧಾನಿ ಕಚೇರಿಗೆ ಸಲ್ಲಿಸಿದೆ. ಆದರೆ ಭ್ರಷ್ಟಾಚಾರಿಗಳ ಮೇಲಿನ ಕ್ರಮದ ಬದಲು ನನ್ನ ಮೇಲೆಯೇ ಕಿರುಕುಳ ಆರಂಭವಾಯಿತು. ಈ ಬಗ್ಗೆ ಪ್ರಧಾನಿ ಕಚೇರಿ ತಳೆದ ನಿಲುವು ಅಸಮಾಧಾನ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿರುವುದು ದಕ್ಷ-ಪ್ರಾಮಾಣಿಕ ಅಧಿಕಾರಿಗಳಿಗೆ ಸ್ಫೂರ್ತಿ ಎಂದ ಚತುರ್ವೇದಿ ತಾವು ಇನ್ನೂ ಹೋರಾಟ ಮುಂದುವರೆಸಿರುವುದು ‘ಸ್ವತಂತ್ರ ನ್ಯಾಯಾಂಗದ ಸಹಾಯದಿಂದ ಮಾತ್ರ ಎಂದು ಒತ್ತಿ ಹೇಳಿದರು.