ಅಂತರಾಷ್ಟ್ರೀಯ

ಈ ಆ್ಯಪ್ ಬಳಸಿ ಮೊಬೈಲ್ ಬಿಲ್ ಕಡಿಮೆ ಮಾಡಿಕೊಳ್ಳಿ !

Pinterest LinkedIn Tumblr

boಬ್ರಿಟಿಷ್ ಕಮ್ಯುನಿಕೇಶನ್ ನ ದಿಗ್ಗಜ ಬಿಟಿ ಗ್ರೂಪ್ ಹೊಸ ಆ್ಯಪ್ ಸಿದ್ದಪಡಿಸಿದೆ. ಈ ಆ್ಯಪ್ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಮೊಬೈಲ್ ಫೋನ್ ಬಿಲ್ ಕಡಿಮೆ ಮಾಡಿಕೊಳ್ಳಬಹುದೆಂದು ಕಂಪನಿ ತಿಳಿಸಿದೆ.

ಆದರೆ ಇದಕ್ಕಾಗಿ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಇರಬೇಕು ಹಾಗೂ ವೈಫೈ ಸಂಪರ್ಕವನ್ನೂ ಹೊಂದಿರಬೇಕಾಗುತ್ತದೆ. ಈ ಆ್ಯಪ್ ಅಳವಡಿಸಿಕೊಂಡ ಬಳಿಕ ಮನೆಯಲ್ಲಿನ ಲ್ಯಾಂಡ್ ಫೋನಿನ ಸಂಪರ್ಕವನ್ನು ಸ್ಮಾರ್ಟ್ ಫೋನ್ ಮೂಲಕ ಸಾಧಿಸಬಹುದಾಗಿದೆ ಎಂದು ಕಂಪನಿ ಹೇಳಿದೆ.

ಸ್ಮಾರ್ಟ್ ಟಾಕ್ ಆ್ಯಪ್ ಎಂದು ಹೆಸರಿಸಲಾಗಿರುವ ಈ ಆ್ಯಪ್ ನ್ನು ಸದ್ಯಕ್ಕೆ ಐಓಸ್ 7 ಮತ್ತು ಅದಕ್ಕೂ ಮೇಲ್ಪಟ್ಟವುಗಳು ಹಾಗೂ ಆ್ಯಂಡ್ರಾಯ್ಡ್ 4, ಐಸ್ ಕ್ರೀಂ ಸ್ಯಾಂಡ್ ವಿಚ್ ಮತ್ತು ಅದಕ್ಕೂ ಮೇಲ್ಪಟ್ಟ ಓಎಸ್ ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಮುಂದೆ ಇತರೆ ಫೋನ್ ಗಳಿಗೂ ಇದನ್ನು ವಿಸ್ತರಿಸುವುದಾಗಿ ಹೇಳಲಾಗಿದೆ.

Write A Comment