ಅಂತರಾಷ್ಟ್ರೀಯ

ತಾಲಿಬಾನ್ ಮುಖಂಡ ಮುಲ್ಲಾ ಒಮರ್ ಸಾವು?

Pinterest LinkedIn Tumblr

mulla omar

ಲಂಡನ್‌ : ಆಫ್ಘಾನಿಸ್ತಾನ ತಾಲಿಬಾನ್ ಮುಖಂಡ, ಒಂಟಿ ಕಣ್ಣಿನ ಮುಲ್ಲಾ ಮೊಹಮ್ಮದ್ ಒಮರ್ ಮೃತಪಟ್ಟಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಒಮರ್‌ ಎರಡು ಅಥವಾ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ ಎಂದು ಆಫ್ಘಾನ್‌ ಸರ್ಕಾರ ಹಾಗೂ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಆದರೆ, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಉಗ್ರ ಸಂಘಟನೆಯು ಶೀಘ್ರವೇ ಪ್ರಕಟಣೆಯೊಂದನ್ನು ಹೊರಡಿಸಲಿದೆ ಎಂದು ತಾಲಿಬಾನ್‌ ವಕ್ತಾರರೊಬ್ಬರ ಹೇಳಿಕೆಯನ್ನು ಉದ್ಧರಿಸಿ ಮಾಧ್ಯಮ ವರದಿ ಮಾಡಿದೆ.

ಅಲ್ಲದೆ, ಈ ಹಿಂದೆಯೂ ಕೂಡ ಹಲವು ಬಾರಿಗೆ ಒಮರ್ ಸಾವಿನ ಸುದ್ದಿಗಳು ವರದಿಯಾಗಿವೆ. ಆದರೆ, ಇದೇ ಮೊದಲ ಬಾರಿಗೆ ಆಫ್ಘಾನ್ ಸರ್ಕಾರದ ಮೂಲಗಳು ಇದನ್ನು ಖಚಿತ ಪಡಿಸಿವೆ ಎಂದು ಬಿಸಿಸಿ ಹೇಳಿದೆ.

ಈ ತಿಂಗಳ ಆರಂಭದಲ್ಲಿ ರಂಜಾನ್‌ ಅಂಗವಾಗಿ ತಾಲಿಬಾನ್‌ ಒಮರ್ ಅವರ ಸಂದೇಶವನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ 13 ವರ್ಷಗಳ ಕದನವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಆಫ್ಘಾನ್‌ ಸರ್ಕಾರ ಹಾಗೂ ತನ್ನ ಸಂಘಟನೆ ನಡುವೆ ಜುಲೈ 7ರಂದು ನಡೆದ ಶಾಂತಿ ಮಾತುಕತೆಯನ್ನು ‘ನ್ಯಾಯ ಸಮ್ಮತ’ ಎಂದು ಆತ ಬಣ್ಣಿಸಿದ್ದ.

Write A Comment