ಅಂತರಾಷ್ಟ್ರೀಯ

ಈ ಗಿಡದಲ್ಲಿ 40 ಬಗೆಯ ವಿವಿಧ ಹಣ್ಣು, ಕಾಯಿ ಆಗುತ್ತೆ ! ಏನು ವಿಚಿತ್ರ …ಮುಂದೆ ಓದಿ

Pinterest LinkedIn Tumblr

tree of 40

ವಾಷಿಂಗ್ಟನ್: ಭಾರತದ ಪೌರಾಣಿಕ ಕಥೆಯಲ್ಲಿ ‘ಕಲ್ಪವೃಕ್ಷ’ದ ಉಲ್ಲೇಖವಿದೆ. ಕೇಳಿದ ವರ ನೀಡುವ ಮರವಿದು ಎನ್ನುವ ಗೌರವವಿದೆ. ‘ಅಂಥದ್ದೇ ಟ್ರೀ ಆಫ್ 40’ ಬಗ್ಗೆ ಗೊತ್ತಾ? ಇದು ಅಂತಿಂಥದ್ದಲ್ಲ. ಒಂದೇ ಮರದಲ್ಲಿ ವಿವಿಧ 40 ಹಣ್ಣು, ಕಾಯಿ ನೀಡಬಲ್ಲದು.

ಕೃಷಿಯಲ್ಲಿ ಆಸಕ್ತಿ ಇರುವ ಸಿರಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕಲಾ ಪ್ರಾಧ್ಯಾಪಕ ವ್ಯಾನ್ ಅಕೇನ್ ಎಂಬುವವರ ಸಂಶೋಧನೆಯ ಫಲವಿದು.

ಈ ಗಿಡದಲ್ಲಿ ಜಲ್ದರು ಹಣ್ಣು, ಪೀಚ್, ಪ್ಲಮ್ ಸೇರಿದಂತೆ ವಿವಿಧ ಹಣ್ಣುಗಳು ಬಿಡುತ್ತವೆ. ಬೈಬಲ್‌ನಲ್ಲಿ ಪದೇ ಪದೇ ಬರುವ ಸಂಖ್ಯೆ 40, ದಾನದ ಪ್ರತೀಕ. ಅದಕ್ಕೆ ಈ ಮರಕ್ಕೂ ‘ಟ್ರೀ ಆಫ್ 40’ ಎಂದು ಹೆಸರಿಸಿರುವುದಾಗಿ ಅಕೇನ್ ಹೇಳುತ್ತಾರೆ.

ಈ ಮರಕ್ಕಾಗಿ ಅಕೇನ್ 2008ರಲ್ಲಿ ಸಂಶೋಧನೆ ಆರಂಭಿಸಿದ್ದರು. ನ್ಯೂಯಾರ್ಕ್ ರಾಜ್ಯದ ಕೃಷಿ ಪ್ರಯೋಗಾಲಯ ಕೇಂದ್ರದ ಫಲೋಧ್ಯಾನದಲ್ಲಿ ಅಕೇನ್ 200 ವಿಧದ ಪ್ಲಮ್ಸ್ ಮತ್ತು ಜಲ್ದರು ಹಣ್ಣು ಬಿಡುವ ಗಿಡಗಳನ್ನು ನೋಡಿದ್ದರು. ಕೃಷಿಯಲ್ಲಿ ವಿಪರೀತ ಒಲವಿರುವ ಅಕೇನ್ ಕಸಿ ಕಲಾ ಪ್ರಯೋಗಕ್ಕೆ ಮುಂದಾದರು.

ಅದರ ಪ್ರತಿಫಲವೇ ಈ ಕ್ರೇಜಿ ಟ್ರೀ ಆಫ್ 40. ಇದನ್ನು ವೈಜ್ಞಾನಿಕ ಸಂಶೋಧನೆ ಎನ್ನುವುದಕ್ಕಿಂತಲೂ ಕಲಾ ಸೃಷ್ಟಿ ಎನ್ನುತ್ತಾರೆ ಅಕೇನ್. ಈ ಸಾಧನೆಯನ್ನು ಆಕೇನ್ ನ್ಯಾಷನಲ್ ಜಿಯೋಗ್ರಾಫಿಕ್ ವೀಡಿಯೋದಲ್ಲಿ ತೋರಿಸಿದ್ದರಿಂದ ಈ ಮರಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸುಮಾರು 19 ಲಕ್ಷ ರೂ. ಮೌಲ್ಯದ ಈ ಗಿಡ ಕೊಂಡರೆ ಹಣ್ಣು ಬಿಡಲು ದಶಕಗಳೇ ಬೇಕಾಗಬಹುದು.

Write A Comment