ಅಂತರಾಷ್ಟ್ರೀಯ

ಭಾರತದ ಬೇಹು ವಿಮಾನವನ್ನು ಹೊಡೆದುರುಳಿಸಿದ್ದೇವೆ: ಪಾಕ್ ಸೇನೆ

Pinterest LinkedIn Tumblr

droneಇಸ್ಲಾಮಾಬಾದ್: ಗಡಿಭಾಗದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಭಾರತದ ಸ್ಪೈ ಡ್ರೋನ್ ವಿಮಾನವನ್ನು ಹೊಡೆದು ಉರುಳಿಸಿರುವುದಾಗಿ ಪಾಕ್ ಹೇಳಿಕೊಂಡಿದೆ.

ನಿಯಂತ್ರಣ ರೇಖೆಯ ಸಮೀಪ ಪಾಕ್ ಆಕ್ರಮಿತ ಪ್ರದೇಶದ ಭಿಮ್‌ಬೇರ್ ಪ್ರದೇಶದ ಚಿತ್ರೀಕರಣವನ್ನು ಡ್ರೋನ್ ಮೂಲಕ ಭಾರತ ನಡೆಸುತ್ತಿತ್ತು. ಅದನ್ನು ನಾಶಪಡಿಸಲಾಗಿದೆ ಎಂದು ಐಎಸ್‌ಪಿಆರ್ ಪ್ರಕಟಣೆಯಲ್ಲಿ ತಿಳಿಸಿದೆ.

”ಪಾಕಿಸ್ತಾನದ ಗಡಿಯೊಳಗೆ ಬೇಹುಗಾರಿಕೆಗೆ ಡ್ರೋನ್ ಬಳಸಲಾಗುತ್ತಿತ್ತು. ಪಾಕಿಸ್ತಾನದ ಗಡಿ ಉಲ್ಲಂಘನೆ ಮಾಡಿದ್ದರಿಂದ ಅದನ್ನು ಹೊಡೆದು ಬೀಳಿಸಲಾಯಿತು,” ಎಂದು ಪಾಕ್ ಸೇನೆ ಹೇಳಿದೆ.

ರಷ್ಯಾದ ಯೂಫಾದಲ್ಲಿ ಮೋದಿ ಮತ್ತು ಷರೀಫ್ ನಡುವೆ ಸಂಬಂಧ ಸುಧಾರಣೆಯ ಮಾತುಕತೆ ನಡೆದ ಒಂದು ವಾರದ ನಂತರ ಈ ಘಟನೆ ನಡೆದಿದೆ.

ನಿರಾಕರಿಸಿದ ಭಾರತ ಪಾಕಿಸ್ತಾನ ಅಪ್ಪಟ ಸುಳ್ಳು ಹೇಳುತ್ತಿದೆ. ಗಡಿಯಾಚೆಗೆ ಭಾರತ ಯಾವುದೇ ಬೇಹುಗಾರಿಕೆ ನಡೆಸುತ್ತಿಲ್ಲ. ಆಂತಹ ಯಾವ ಗುಪ್ತಚರ ವಿಮಾನದ ಹಾರಾಟವೂ ನಡೆದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

Write A Comment