ಅಂತರಾಷ್ಟ್ರೀಯ

ಕೆನಡಾದ ವರ ವಧುವಿಗೆ ಕಣ್ಣೀರಾಕಿಸಿದ ಕಾರಣ ನೋಡಿದ್ರೆ ಮೆಚ್ಚಿಕೊಳ್ತಿರಿ

Pinterest LinkedIn Tumblr

2260o-SIMRAN-AND-FRANK-2015-SONG-facebookಭಾರತೀಯ ಮೂಲದ ವಧುವಿನೊಂದಿಗೆ ವಿವಾಹವಾಗಲು ಮುಂದಾಗಿದ್ದ ಕೆನಡಾದ ವರನಿಗೆ ತನ್ನ ಪತ್ನಿಯಾಗುವವಳಿಗೆ ಒಂದು ಅಚ್ಚರಿಯೆ ಗಿಫ್ಟ್ ನೀಡಬೇಕೆಂಬ ಆಸೆಯಾಗಿದೆ. ಅದಕ್ಕಾಗಿ ಆತ ಮಾಡಿದ್ದದಾರೂ ಏನು. ಈ ವಧು ಅದನ್ನು ನೋಡಿ ಏಕೆ ಕಣ್ಣೀರಾಕಿದಳು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.

ಕೆನಡಾದ ಫ್ರಾಂಕ್ ಗ್ರೆಗೋರಿ ಭಾರತೀಯ ಮೂಲದ ಸಿಮ್ರಾನ್ ಮಲೋತ್ರಾ ಜೊತೆ ವಿವಾಹ ಮಾಡಿಕೊಂಡಿದ್ದು, ವಿವಾಹದ ದಿನದಂದು ಪತ್ನಿ ಹಾಗೂ ವಿವಾಹಕ್ಕೆ ಆಗಮಿಸಿದ್ದ ಅತಿಥಿಗಳ ಮುಂದೆ ‘ಅಶಿಕಿ 2′ ಚಿತ್ರದ ತುಮ್ ಹೀ ಹೋ’ ಹಾಡನ್ನು ಹಾಡಿದ್ದಾನೆ. ಪಿಯಾನೋ ಬಾರಿಸುವುದು ಹಾಗೂ ಹಾಡು ಕಲಿಯಲು ಫ್ರಾಂಕ್ ಗ್ರೆಗೋರಿ ಆರು ವಾರಗಳ ಕಾಲ ಕಷ್ಟಪಟ್ಟಿದ್ದಾನೆ.

ವಿವಾಹದ ದಿನದಂದು ಫ್ರಾಂಕ್ ಗ್ರೆಗೋರಿ ಈ ಹಾಡು ಹಾಡುತ್ತಿದ್ದಂತೆಯೇ ಭಾವೋದ್ವೇಗಕ್ಕೊಳಗಾದ ಸಿಮ್ರಾನ್ ಆನಂದ ಭಾಷ್ಪ ಸುರಿಸಿದ್ದಾರೆ. ನೆರೆದ ಅತಿಥಿಗಳೂ ಫ್ರಾಂಕ್ ತನ್ನ ಪತ್ನಿಗೆ ನೀಡಿದ ಈ ವಿಶೇಷ ಗಿಫ್ಟ್ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Write A Comment