ಅಂತರಾಷ್ಟ್ರೀಯ

ಬಾಂಗ್ಲಾದಲ್ಲಿ ಭಾರತೀಯ ಹಾಡುಗಳ ಮೊಬೈಲ್ ರಿಂಗ್‌ಟೋನ್‌ಗೆ ನಿಷೇಧ

Pinterest LinkedIn Tumblr

mobileಢಾಕಾ: ಭಾರತೀಯ ಚಿತ್ರಗಳ ಹಾಡು ಸೇರಿದಂತೆ ಇತರೆ ಯಾವುದೇ ದೇಶಗಳ ಸಿನಿಮಾ ಹಾಡುಗಳಗಳನ್ನು ಮೊಬೈಲ್ ರಿಂಗ್‌ಟೋನ್ ಅಥವಾ ಸ್ವಾಗತ ರಾಗಗಳಿಗೆ ಬಳಸುವಂತಿಲ್ಲ ಎಂದು ಬಾಂಗ್ಲಾದೇಶ ಕೋರ್ಟ್ ಆದೇಶಿಸಿದೆ. ಇದು ಬಾಂಗ್ಲಾದ 121 ಮಿಲಿಯನ್ ಮೊಬೈಲ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದೂರವಾಣಿ ನಿರ್ವಾಹಕರು ಮೌಲ್ಯವರ್ಧಿತ ಸೇವೆ(ವಿಎಎಸ್)ಯನ್ನು ವಂಚಿಸಿ ಹಿಂದಿ ಚಿತ್ರ, ಭಾರತೀಯ ಬಾಂಗ್ಲಾ ಸಿನಿಮಾಗಳ ಮತ್ತು ಇತರೆ ಯಾವುದೇ ದೇಶಗಳ ಸಿನಿಮಾ ಹಾಡು ಅಥವಾ ಟ್ಯುನ್ ಬಳಸುವಂತಿಲ್ಲ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ಬಿಡಿನ್ಯೂಸ್ 24 ಆನ್‌ಲೈನ್ ವರದಿ ಮಾಡಿದೆ.

ನಿಷೇಧ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಫರಾ ಮೆಹಬೂಬ್ ಮತ್ತು ನ್ಯಾ.ಕಝಿ ಎಂಡಿ ಇಜರುಲ್ ಹಖೀ ಈ ಆದೇಶ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಸಂಸ್ಕೃತಿ, ಮಾಹಿತಿ, ಗೃಹ ಮತ್ತು ಕಾನೂನು ಸಚಿವಾಲಯ, ಬಿಟಿಆರ್‌ಸಿ ಅಧ್ಯಕ್ಷ ಮತ್ತು ಎಲ್ಲಾ ಮೊಬೈಲ್ ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಸಂಗೀತ ಉದ್ಯಮ ಮಾಲೀಕರ ಸಂಘದ ಅಧ್ಯಕ್ಷ ಎಕೆಎಂ ಅರಿಫುರ್ ರೆಹಮಾನ್ ಮತ್ತು ಪ್ರಧಾನಿ ಕಾರ್ಯದರ್ಶಿ ಎಸ್‌ಕೆ. ಶಹೆದ್ ಅಲಿ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.

Write A Comment