ಬೀಜಿಂಗ್: ಕುಡಿದ ಮತ್ತಿನಲ್ಲಿ ಹೆಂಡತಿ ಮಕ್ಕಳನ್ನು ಹೊಡೆಯುವುದು ಮಾಮೂಲಿ… ಆದರೆ ಚೀನಾದ ಬಿಯಾಂಗ್ ಕ್ಸಿ ಯಲ್ಲಿ ಕುಡುಕ ಪತಿಯೊಬ್ಬ ತನ್ನ ಪತ್ನಿಯನ್ನು ಅರೆಬೆತ್ತಲೆಗೊಳಿಸಿ ನಡು ರಸ್ತೆಯಲ್ಲಿ ಪರೇಡ್ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ.
ಪತ್ನಿ 33 ವರ್ಷದ ವಾಂಗ್ ನೀ ಗಂಡು ಮಗುವನ್ನು ಹೇರಲಿಲ್ಲ ಎಂದು ಕೋಪಗೊಂಡಿದ್ದ 37 ವರ್ಷದ ಝಾಂಗ್ ಕುಡಿದ ಮತ್ತಿನಲ್ಲಿ ಪತ್ನಿ ಕೈಯಲ್ಲಿ ‘ಐ ವಾಂಟ್ ಟು ಸೆಲ್ ಮೈ ಬಾಡಿ’ ಎಂಬ ಬೋರ್ಡ್ ಹಿಡಿಸಿ ನಗರದ ಬೀದಿ ಬೀದಿಯಲ್ಲಿ ಸುತ್ತಿಸಿದ್ದಾನೆ. ಅದು ಅಲ್ಲದೆ ಅರೆಬೆತ್ತಲೆಯಲ್ಲಿ ಹೆಂಡತಿ ಬೋರ್ಡ್ ಹಿಡಿದು ನಡೆದುಹೋಗುತ್ತಿದ್ದರೆ ಹಿಂದಿನಿಂದ ಕಾರಿನಲ್ಲಿ ಹಿಂಬಾಲಿಸಿದ್ಧಾನೆ.
ಸ್ಥಳೀಯ ಮಾಧ್ಯಮ ವರದಿ ಪ್ರಕಾರ, ಝಾಂಗ್ ಹಾಗೂ ವಾಂಗ್ ನೀ ಇಬ್ಬರು 10 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

