ಕನ್ನಡ ವಾರ್ತೆಗಳು

`ಜುಗಾರಿ’ ತುಳು- ಕನ್ನಡ ಚಲನ ಚಿತ್ರಕ್ಕೆ ಅದ್ದೂರಿ ಮುಹೂರ್ತ

Pinterest LinkedIn Tumblr

Jugaari_Muhurtha_photo_2

ಮಂಗಳೂರು: `ನೈನ್ ಓ ಕ್ಲಾಕ್ ಕ್ರಿಯೇಷನ್ಸ್’ ಲಾಂಛನದಲ್ಲಿ ಪಮ್ಮಿ ಕೊಡಿಯಾಲ್ ಬೈಲ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಆನಂದ್ ಪಿ.ರಾಜುರವರ ನಿರ್ದೇಶನದಲ್ಲಿ ಮೂಡಿಬರಲಿರುವ ‘ಜುಗಾರಿ’ ಬಲಿಪೆರೆ ಇಜ್ಜಿ ತುಳು- ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಗುರುವಾರ ಬೆಳಿಗ್ಗೆ ನಗರದ ಬೆಸೆಂಟ್ ಸಮೀಪದ ಪಿ.ವಿ.ಎಸ್. ಕಲಾಕುಂಜ ರಸ್ತೆಯ ಭಗವತೀ ದೇವಸ್ಥಾನದಲ್ಲಿ ಜರಗಿತ್ತು.

ಚಿತ್ರದ ನಿರ್ಮಾಪಕ ಪಮ್ಮಿ ಕೊಡಿಯಾಲ್ ಬೈಲ್ ಅವರ ಆಮ್ಮ ಶಾಂಭವಿ ಆಶೀರ್ವಾದ ನೀಡಿದರು. ಸ್ಯಾಂಡಲ್ ವುಡ್‌ನ ಖ್ಯಾತ ನಟಿ ರಾಗಿಣಿ ದ್ವಿವೆದಿ ಕ್ಲಾಪ್ ಮಾಡಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಅಮರನಾಥ ಶೆಟ್ಟಿ,ಚಿತ್ರ ನಿರ್ಮಾಪಕರಾದ ಕಿಶೋರ್ ಡಿ.ಶೆಟ್ಟಿ, ದೇವ್‌ದಾಸ್ ಪಾಂಡೇಶ್ವರ್, ಗಂಗಾಧರ್ ಶೆಟ್ಟಿ ಅಳಕೆ, ಅಮೀತ್ ರಾವ್, ತೇಜಸ್ವಿರಾಜ್, ಕಾರ್ಪೊರೇಟರ್ ನವೀನ್ ಚಂದ್ರ, ರಾಜೇಶ್ ಡಿ.ಶೆಟ್ಟಿ, ನವೀನ್ ಕುಮಾರ್, ಹರೀಶ್ ಕರ್ಕೇರ, ತಿಲಕ್, ಸೂರಜ್ ಶೆಟ್ಟಿ ಮುಂತಾದವರು ಅತಿಥಿಗಳಾಗಿದ್ದರು.

Jugaari_Muhurtha_photo_1 Jugaari_Muhurtha_photo_3 Jugaari_Muhurtha_photo_4 Jugaari_Muhurtha_photo_5 Jugaari_Muhurtha_photo_6 Jugaari_Muhurtha_photo_7 Jugaari_Muhurtha_photo_8 Jugaari_Muhurtha_photo_9

ಚಿತ್ರದ ನಿರ್ದೇಶಕ ಆನಂದ್ ಪಿ.ರಾಜು, ಚಿತ್ರದ ನಾಯಕ ಕಾರ್ತಿಕ್ ಬಂಜನ್, ನಾಯಕಿ ಎಸ್ತೇರ್ ನರೋನ್ಹಾ ಹಾಗೂ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು. ಚಿತ್ರದ ಸಹ ನಿರ್ಮಾಪಕ ಆರ್.ಧನರಾಜ್ ಸ್ವಾಗತಿಸಿದರು.

ಎರಡು ಹಂತದಲ್ಲಿ ಜುಗಾರಿ ಸಿನಿಮಾಕ್ಕೆ ಚಿತ್ರೀಕರಣ ನಡೆಯಲಿದೆ. ತುಳು- ಕನ್ನಡ ಎರಡೂ ಭಾಷೆಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗುವುದು. ಉತ್ತಮ ಕತೆಯ ಜತೆಗೆ ಜನರಿಗೆ ಬೇಕಾದ ಸಂಪೂರ್ಣ ಮನರಂಜನೆಯನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ. ಜುಗಾರಿ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಸಿನಿಮಾದಲ್ಲಿ ಗುರುಕಿರಣ್ ಸಂಗೀತ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ ಎಂದು ಚಲನ ಚಿತ್ರದ ನಿರ್ಮಾಪಕರಾದ ಪಮ್ಮಿ ಕೊಡಿಯಾಲ್‍ಬೈಲ್ ಈ ಸಂದರ್ಭದಲ್ಲಿ ತಿಳಿಸಿದರು.

Jugaari_Muhurtha_photo_10 Jugaari_Muhurtha_photo_11 Jugaari_Muhurtha_photo_12 Jugaari_Muhurtha_photo_13 Jugaari_Muhurtha_photo_14 Jugaari_Muhurtha_photo_15 Jugaari_Muhurtha_photo_16 Jugaari_Muhurtha_photo_17 Jugaari_Muhurtha_photo_18 Jugaari_Muhurtha_photo_19 Jugaari_Muhurtha_photo_20 Jugaari_Muhurtha_photo_21 Jugaari_Muhurtha_photo_22 Jugaari_Muhurtha_photo_23 Jugaari_Muhurtha_photo_24 Jugaari_Muhurtha_photo_25

ಚಿತ್ರದಲ್ಲಿ ಕಾರ್ತಿಕ್ ಬಂಜನ್ ನಾಯಕನಾಗಿದ್ದು, ಎಸ್ತೇರ್ ನರೋನ್ಹಾ ನಾಯಕಿಯಾಗಿದ್ದಾರೆ. ಅಮಿತ್‍ ರಾವ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್ ಭೋಜರಾಜ ವಾಮಂಜೂರು, ಶೋಭರಾಜ್, ಸಂತೋಷ್ ಶೆಟ್ಟಿ, ಗೋಪಿನಾಥ ಭಟ್, ಚೇತನ್ ರೈ ಮಾಣಿ, ಸತೀಶ್ ಬಂದಲೆ ಶೋಭಾ ರೈ, ಅಭೀಷಾ, ಮಾಸ್ಟರ್ ಸಾಜನ್ ಶೆಟ್ಟಿ, ಮೊದಲಾದವರು ಅಭಿನಯಿಸುತ್ತಿದ್ದಾರೆ.

ಸುರೇಶ್‍ಬಾಬು ಛಾಯಾಗ್ರಹಣ, ಸಂಕಲನ: ಶಿವರಾಜ್ ಮೇಹು, ಸಾಹಸ: ಕೌರವ್ ವೆಂಕಟೇಶ್, ಕಥೆ: ಪಮ್ಮಿ ಕೊಡಿಯಾಲ್ ಬೈಲ್, ಕಥೆ -ವಿಸ್ತಾರ: ಎನ್ನಾರ್ ಕೆ.ವಿಶ್ವನಾಥ್, ಕಲೆ: ಕೇಶವ ಸುವರ್ಣ, ನೃತ್ಯ: ರಾಜೇಶ್ ಬ್ರಹ್ಮಾವರ, ಸಂಭಾಷಣೆ: ಮಂಜು ರೈ ಮೂಳೂರು, ಸಾಹಿತ್ಯ: ನಿತಿನ್ ಬಂಗೇರ ಚಿಲಿಂಬಿ, ಸಹಾಯಕ ನಿರ್ದೇಶನ: ಹರೀಶ್, ಪ್ರಕಾಶ್, ನಿರ್ಮಾಣ ನಿರ್ವಹಣೆ: ಸತೀಶ್ ಬ್ರಹ್ಮಾವರ.

Write A Comment