ಅಂತರಾಷ್ಟ್ರೀಯ

ಇಂಡೋನೇಷ್ಯಾ: ಜನವಸತಿ ಪ್ರದೇಶದಲ್ಲಿ ವಿಮಾನ ಪತನ; 30 ಮಂದಿ ಸಾವು

Pinterest LinkedIn Tumblr

planecrashಡೋನೇಷ್ಯಾದ ಸುಮಾತ್ರ ದ್ವೀಪದ ಸಮೀಪ ಜನವಸತಿ ಪ್ರದೇಶದಲ್ಲಿ ಪತನಗೊಂಡ ವಿಮಾನ
ಜಕಾರ್ತ: ತಾಂತ್ರಿಕ ಸಮಸ್ಯೆಯಿಂದ ಮಿಲಿಟರಿ  ವಿಮಾನವೊಂದು ಪತನಗೊಂಡ ಪರಿಣಾಮ 30 ಮಂದಿ ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಮೀಪ ಜನವಸತಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಇದೊಂದು ಸರಕು ಸಾಗಣೆ ವಿಮಾನವಾಗಿದ್ದು, ಇದರಲ್ಲಿ ಪ್ರಯಾಣಿಸುತ್ತಿದ್ದ 12 ಸಿಬ್ಬಂದಿ ಸೇರಿದಂತೆ 18 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆಎಂದು ಇಂಡೋನೇಷ್ಯಾದ ವಾಯುಪಡೆಯ ಮುಖ್ಯಸ್ಥ ಆಗಸ್‌ ಸುಪ್ರಿಂತಾ ಖಾಸಗಿ ತಿಳಿಸಿದ್ದಾರೆ.

ವಿಮಾನ ಪತನಗೊಳ್ಳುವ ಕೆಲವೇ ಕ್ಷಣಗಳ ಮುಂಚೆ ಪೈಲಟ್‌, ನಿಲ್ದಾಣದಲ್ಲಿನ ನಿಯಂತ್ರಣ ಕೊಠಡಿಗೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇದೆ ಎನ್ನುವ ತುರ್ತು ಸಂದೇಶ ಕಳುಹಿಸಿದ್ದರು. ಸಾವಿನ ಸಂಖ್ಯೆ ಇನ್ನೂ ನಿಖರಾವಿಗ ತಿಳಿದುಬಂದಿಲ್ಲ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Write A Comment