ರಾಷ್ಟ್ರೀಯ

ದೇವಾಸ್ಥಾನವನ್ನು ಕಾಯುತ್ತಿದೆ ಈ ಸಸ್ಯಹಾರಿ ಮೊಸಳೆ

Pinterest LinkedIn Tumblr

crocodileತಿರುವನಂತಪುರ: ಮೊಸಳೆ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮಾಂಸಹಾರಿ ಪ್ರಾಣಿ ಮತ್ತು ಭಯಾನಕ ಪ್ರಾಣಿ. ನೀರಿನಲ್ಲಿ ಮೊಸಳೆ ಇತ್ತೆಂದರೆ ಎಂತಹವರು ನೀರಿಗೆ ಇಳಿಯುವುದಕ್ಕೆ ಭಯಪಡುವಂತದ್ದು ಸಾಮಾನ್ಯ.

ಆದರೆ, ಇಲ್ಲೊಂದು ಸಸ್ಯಾಹಾರಿ ಮೊಸಳೆ ಇದೆ ಅಂದ್ರೆ ನಂಬುದುವುದಕ್ಕೆ ಸ್ವಲ್ಪ ಕಷ್ಟ ಅನಿಸಿದ್ರು ನಂಬಲೇಬೇಕಿದೆ. ಏಕೆಂದರೆ ಆ ಮೊಸಳೆ ದೇವಾಲಯ ಒಂದರ ಕಾವಲುಗಾರ ಅನ್ನೋ ಪ್ರತೀತಿ ಇದೆ.

ಹೌದು ಇದು ಬಾಬಿಯಾ ಎಂಬ ಹೆಸರಿನ ಸಸ್ಯಾಹಾರಿ ಮೊಸಳೆ. ಇದು ಕೇರಳದ ಅನಂತಪುರ ದೇವಾಲಯದ ಸಮೀಪದ ಸರೋವರದಲ್ಲಿ ವಾಸವಿದೆ. ಸುಮಾರು 150 ವರ್ಷಗಳಿಂದ ಈ ಮೊಸಳೆ ಇಲ್ಲಿ ವಾಸವಾಗಿದೆ ಎನ್ನಲಾಗುತ್ತಿದೆ.

ಈ ಮೊಸಳೆಗೆ ಸಂಬಂಧಿಸಿದಂತೆಯೇ ಒಂದು ದಂತಕಥೆಯೇ ಇದೆ. ಈ ಮೊಸಳೆಯನ್ನು ದೇವಾಲಯದ ಕಾವಲುಗಾರ ಎಂದು ಹೇಳಲಾಗುತ್ತದೆ. ಸುಮಾರು 67 ವರ್ಷಗಳ ಹಿಂದೆ ಬ್ರಿಟಿಷರು ಇಲ್ಲಿ ಮೊಸಳೆಯನ್ನು ಕೊಂದಿದ್ದರು. ಮರುದಿನವೇ ಮತ್ತೊಂದು ಮೊಸಳೆ ಕಾಣಿಸಿಕೊಂಡಿತ್ತು. ಅದು ಈಗಲೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಈ ದೇವಾಲಯದ ಪ್ರಮುಖ ಆಕರ್ಷಣೆ ಮೊಸಳೆಯಾಗಿದ್ದು, ದಿನನಿತ್ಯ ನೂರಾರು ಜನರು ಮೊಸಳೆ ವಿಕ್ಷಣೆಗೆ ಬರುತ್ತಾರೆ. ಆದರೆ ಮೊಸಳೆ ಹೆಚ್ಚಾಗಿ ಜನರ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಮುಖ್ಯದೇವಾಲಯದ ನೈರುತ್ಯ ದಿಕ್ಕಿನ ಕಡೆಗೆ ಕೃಷ್ಣನ ದೇವಾಲಯದ ಎದುರಿನ ಸರೋವರದ ಪಕ್ಕದಲ್ಲಿನ ಗುಹೆಯಲ್ಲಿ ಮೊಸಳೆ ಇದೆ.

ಈ ಮೊಸಳೆ ಅಪ್ಪಟ ಸಸ್ಯಾಹಾರಿ. ಎಷ್ಟರಮಟ್ಟಿಗೆ ಅಂದ್ರೆ ಇದು ಸರೋವರದ ಮೀನುಗಳನ್ನೂ ಸಹ ತಿನ್ನುವುದಿಲ್ಲ. ಸರಿಯಾಗಿ ಮಧ್ಯಾಹ್ನದ 12 ಗಂಟೆಯ ಪೂಜೆಯ ನಂತರದ ಊಟದ ಸಮಯದಲ್ಲಿ ಸರೋವರದಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಪುರೋಹಿತರು ಹಾಕುವ ಅಕ್ಕಿ ಮತ್ತು ಬೆಲ್ಲದ ಅಂಬಲಿಯೇ ದಿನನಿತ್ಯದ ಆಹಾರ. ನಂತರ ಹತ್ತಿರದಲ್ಲಿನ ಗುಹೆಯ ಕಡೆಗೆ ಹೋಗುತ್ತದೆ. ಅದು ಮತ್ತೆ ಕಾಣಿಕೊಳ್ಳುವುದು ಮರುದಿನ ಮಧ್ಯಾಹ್ನ ಊಟದ ಸಮಯದಲ್ಲಿಯೇ..

ಈ ಮೊಸಳೆ ದೇವಾಲಯವನ್ನು ಕಾವಲು ಕಾಯುತ್ತಿದೆ ಎಂಬುದು ಪುರೋಹಿತರು ಹಾಗೂ ಭಕ್ತಾದಿಗಳ ನಂಬಿಕೆ

Write A Comment