ರಾಷ್ಟ್ರೀಯ

ವ್ಯಾಪಂ ಹಗರಣ ಸಿಬಿಐ ಗೆ ವಹಿಸಲು ಸುಪ್ರಿಂ ಸೂಚಿಸಲಿ, ದಿಗ್ವಿಜಯ್ ಸಿಂಗ್ ಮನವಿ

Pinterest LinkedIn Tumblr

diggi-2ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ವರ್ಷದಲ್ಲಿ 44 ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ  ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರಿಂ ಕೋರ್ಟ್ ನಿರ್ದದೇಶನ ನೀಡಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ದಿಗ್ವಿಜಯ್ ಸಿಂಗ್ ಮನವಿ ಮಾಡಿದ್ದಾರೆ.

ಮಧ್ಯ ಪ್ರದೇಶದಲ್ಲಿ ನಡೆದಿರುವ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 44 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐ  ತನಿಖೆಗೆ ವಹಿಸಬೇಕೆಂದು ದಿಗ್ವಿಜಯ್ ಸಿಂಗ್ ಸುಪ್ರಿಂ ಕೋರ್ಟ್ ನಲ್ಲಿ ಅಫೀಲು ಸಲ್ಲಿಸಿದ್ದಾರೆ.

44 ಮಂದಿ ಸಾವನ್ನಪಪ್ಪಿರುವುದಕ್ಕೂ ವ್ಯಾಪಂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಮಧ್ಯ ಪ್ರದೇಶ  ಗೃಹ ಸಚಿವ ಬಾಬು ಲಾಲ್ ಕೌರ್ ಹೇಳಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ವ್ಯಾಪಂ ಹಗರಣ ಸಂಬಂಧ 23 ಮಂದಿಯದ್ದು ಅಸಹಜ ಸಾವು ಎಂದು ಮಧ್ಯಪ್ರದೇಶ ಹೈ ಕೋರ್ಟ್ ದೆ ವರದಿ ಸಲ್ಲಿಸಿದೆ.

Write A Comment