ಅಂತರಾಷ್ಟ್ರೀಯ

ಒಂದು ವಾರ ಬ್ಯಾಂಕ್‌ ಬಂದ್‌ಗೆ ಗ್ರೀಸ್‌ ಆದೇಶ

Pinterest LinkedIn Tumblr

greeceಅಥೆನ್ಸ್: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಗ್ರೀಸ್‌ನಲ್ಲಿ ಬ್ಯಾಂಕ್‌ಗಳನ್ನು ಸೋಮವಾರದಿಂದ ಒಂದು ವಾರದ ತನಕ ಮುಚ್ಚಲಾಗಿದೆ. ಎಟಿಎಂಗಳಲ್ಲಿ ದುಡ್ಡಿನ ಕೊರತೆ ಉಂಟಾಗಿರುವುದಲ್ಲದೆ, ಅಲ್ಲಿಯೂ ಹಿಂತೆಗೆತಕ್ಕೆ ಮಿತಿಗಳನ್ನು ವಿಧಿಸಲಾಗಿದೆ.

ಜುಲೈ 7ರ ತನಕ ಸರಕಾರ ಬಂಡವಾಳ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತಿದೆ ಎಂದು ಗ್ರೀಸ್‌ನ ಪ್ರಧಾನಿ ಅಲೆಕ್ಸಿಸ್ ಸೈಪ್ರಸ್ ಹೇಳಿದ್ದಾರೆ. ಇದರ ಪರಿಣಾಮ ಜನತೆ ವೈಯಕ್ತಿಕವಾಗಿ ಒಂದು ವಾರಗಳ ಕಾಲ ಪ್ರತಿ ದಿನ ಎಟಿಎಂಗಳಿಂದ ಗರಿಷ್ಠ 66 ಡಾಲರ್ (ಅಂದಾಜು 4,191 ರೂ.) ಮಾತ್ರ ಹಿಂತೆಗೆದುಕೊಳ್ಳಬಹುದು. ಹೀಗಿದ್ದರೂ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಜನತೆ ತಮ್ಮ ಬಿಲ್‌ಗಳನ್ನು ಪಾವತಿಸಬಹುದು. ವಿದೇಶಿ ಖಾತೆಗೆ ಹಣ ವರ್ಗಾಯಿಸುವಂತಿಲ್ಲ.

ಯಾಕೆ ಈ ನಿಯಂತ್ರಣ? ಗ್ರೀಕ್‌ನಲ್ಲಿರುವ ಬ್ಯಾಂಕ್‌ಗಳಿಂದ ಯೂರೋ ವಿದೇಶಗಳ ಬ್ಯಾಂಕ್‌ಗಳಿಗೆ ಹೋಗುವುದನ್ನು ತಪ್ಪಿಸಲು ಸರಕಾರ ಬಂಡವಾಳ ನಿಯಂತ್ರಣ ಕ್ರಮಗಳನ್ನು ಘೊಷಿಸಿ, ದೈನಂದಿನ ಹಣದ ವಹಿವಾಟಿಗೆ ನಿರ್ಬಂಧಗಳನ್ನು ಹೇರಿದೆ.

ಗ್ರೀಸ್ ಪ್ರವಾಸಿಗರಿಗೆ? ವಿದೇಶಗಳ ಕ್ರೆಡಿಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ಗ್ರೀಸ್‌ನ ಎಟಿಎಂಗಳಲ್ಲಿ ಮುಕ್ತವಾಗಿ ಬಳಸಬಹುದು. ಇದರಿಂದ ಗ್ರೀಸ್‌ನ ಪ್ರವಾಸೋದ್ಯಮಕ್ಕೂ ಅವರು ಕೊಡುಗೆ ನೀಡಿದಂತಾಗುತ್ತದೆ. ಒಟ್ಟಿನಲ್ಲಿ ಗ್ರೀಕ್ ಬ್ಯಾಂಕ್‌ನ ಖಾತೆಯಲ್ಲದಿದ್ದರೆ ಹಣ ತೆಗೆದುಕೊಳ್ಳಲು ಸಮಸ್ಯೆಯಾಗುವುದಿಲ್ಲ. ಗ್ರೀಕ್ ಬ್ಯಾಂಕ್‌ನ ಖಾತೆಯದ್ದಾಗಿದ್ದರೆ ಮಾತ್ರ ನಿರ್ಬಂಧ ಇದೆ.

Write A Comment