ಅಂತರಾಷ್ಟ್ರೀಯ

2017ರೊಳಗೆ ಮಾನವ ದೇಹಕ್ಕೆ ಕೃತಕ ರಕ್ತಪೂರಣ; ಮಾನವನ ದೇಹಕ್ಕೆ ಕೃತಕ ರಕ್ತ ಪೂರೈಕೆ ಮಾಡುವ ಪ್ರಯೋಗಕ್ಕೆ ಕೈ ಹಾಕಿದ ಬ್ರಿಟನ್

Pinterest LinkedIn Tumblr

blood-test

ಲಂಡನ್: ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿಪಡಿಸಿದ ಕೃತಕ ರಕ್ತವನ್ನು ಇದೇ ಮೊದಲ ಬಾರಿಗೆ ಮಾನವನ ಮೇಲೆ ಪ್ರಯೋಗ ಮಾಡಲು ಬ್ರಿಟನ್ ನಿರ್ಧರಿಸಿದೆ.

ಬ್ರಿಟನ್‍ನ ರಾಷ್ಟ್ರೀಯ ಆರೋಗ್ಯ ಸೇವೆ(ಎನ್‍ಎಚ್‍ಎಸ್)ಗಳ ರಕ್ತ ಮತ್ತು ಕಸಿ ವಿಭಾಗವು 2017ರೊಳಗೆ ಮಾನವ ದೇಹಕ್ಕೆ ರಕ್ತಪೂರಣ ಮಾಡುವುದಾಗಿ ಘೋಷಿಸಿದೆ.

ಬ್ರಿಸ್ಟಾಲ್ ಹಾಗೂ ಎನ್‍ಎಚ್‍ಎಸ್ ರಕ್ತ ಮತ್ತು ಕಸಿ ವಿಭಾಗದ ಸಂಶೋಧಕರು ಸ್ಟೆಮ್ ಸೆಲ್ ಅನ್ನು ಬಳಸಿಕೊಂಡು ಲ್ಯಾಬೊರೇಟರಿಯಲ್ಲಿ ಕೃತಕ ರಕ್ತ ಅಭಿವೃದ್ಧಿಪಡಿಸಿದ್ದರು. ಸಿಕಲ್‍ಸೆಲ್ ಅನೀಮಿಯಾ ಮತ್ತು ತಾಲ್ಸಾಮಿಯಾದಂಥ ರಕ್ತಕ್ಕೆ ಸಂಬಂಧಿಸಿದ ವಿಶೇಷ ರೋಗಗಳಿಂದ ಬಳಲುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ಈ ರಕ್ತವನ್ನು ಅಭಿವೃದ್ಧಿಪಡಿಸಲಾಗಿದೆ. ಯಾಕೆಂದರೆ ಇಂಥ ರೋಗಿಗಳಿಗೆ ದೀರ್ಘಕಾಲದವರೆಗೆ ದಾನಿಗಳನ್ನು ಹುಡುಕುವುದು ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ರಕ್ತದ ಸಮಸ್ಯೆಯಿಂದ ಬಳಲುತ್ತಿರುವ, ತುರ್ತು ಪರಿಸ್ಥಿತಿಯಲ್ಲಿ ರಕ್ತ ಸಿಗದೆ ಒದ್ದಾಡುತ್ತಿರುವ ಕೋಟ್ಯಂತರ ಮಂದಿಗೆ ಈ ಕೃತಕ ರಕ್ತ ಆಶಾಕಿರಣವಾಗಿ ಪರಿಣಮಿಸಲಿದೆ.

ಪ್ರಯೋಗದ ಭಾಗವಾಗಿ 20 ಸ್ವಯಂಸೇವಕರ ದೇಹಕ್ಕೆ ಐದರಿಂದ 10 ಮಿಲಿ ಲೀಟರ್‍ನಷ್ಟು ಕೃತಕ ರಕ್ತಪೂರಣ ಮಾಡಲಾಗುತ್ತದೆ. ಈ ಪ್ರಯೋಗದಿಂದ ಮಾನವ ದೇಹದಲ್ಲಿ ಈ ಕೃತಕ ರಕ್ತ ಹೇಗೆ ವರ್ತಿಸುತ್ತದೆ ಎನ್ನುವುದು ಸ್ಪಷ್ಟವಾಗಲಿದೆ. ಈ ಪ್ರಯೋಗದ ಉದ್ದೇಶ ರಕ್ತದಾನಕ್ಕೆ ಪರ್ಯಾಯವಾಗಿ ಕೃತಕ ರಕ್ತವನ್ನು ಅಭಿವೃದ್ಧಿಪಡಿಸುವುದಲ್ಲ. ಬದಲಾಗಿ ಕೆಲವು ವಿಶೇಷ ರೋಗಿಗಳಿಗೆ ವಿಶೇಷ ಚಿಕಿತ್ಸೆ ಆಗಿದೆ ಎನ್ನುತ್ತಾರೆ ಸಂಶೋಧಕರು.

Write A Comment