ಅಂತರಾಷ್ಟ್ರೀಯ

ಕುವೈತ್ ಮಸೀದಿ ದಾಳಿಕೋರ ಸೌದಿ ಪ್ರಜೆ

Pinterest LinkedIn Tumblr

kuwait1ದುಬೈ: ಕುವೈತ್‌ನ ಶಿಯಾ ಮಸೀದಿಯಲ್ಲಿ ಅಪಾರ ಸಾವು ನೋವಿಗೆ ಕಾರಣವಾದ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ, ಎಂದು ಆಂತರಿಕ ಸಂಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.

ಕಳೆದ ಶುಕ್ರವಾರ ಅಲ್ ಇಮಾಮ್ ಅಲ್ ಸಾದೇಖ್ ಮಸೀದಿ ಮೇಲೆ ನಡೆದ ದಾಳಿಯಲ್ಯಲಿ 26 ಮಂದಿ ಮೃತಪಟ್ಟರೆ, 227 ಮಂದಿ ಗಾಯಗೊಂಡಿದ್ದರು, ಎಂದು ಸಚಿವಾಲಯ ಹೇಳಿದೆ.

‘ಫಾದ್ ಸುಸೈಮನೆ ಅಬ್ದುಲ್ಮೊಹ್ಸೆನ್ ಅಲ ಖುಬಾಆ ಎಂದು ದಾಳಿಕೋರನನ್ನು ಗುರುತಿಸಲಾಗಿದೆ,’ ಎಂದು ಸಚಿವಾಲಯದ ಹೇಳಿಕೆಯನ್ನು ನ್ಯೂಸ್ ಏಜೆನ್ಸಿಯೊಂದು ಪ್ರಕಟಿಸಿದೆ.

ಕುವೈತ್ ವಿಮಾನ ನಿಲ್ದಾಣದ ಮೂಲಕ ಬಾಂಬ್ ದಾಳಿ ನಡೆದ ಶುಕ್ರವಾರ ಮುಂಜಾನೆಯೇ ಖುಬಾಅ ದೇಶವನ್ನು ಪ್ರವೇಶಿಸಿದ್ದಾನೆ. ಖುಬಾಅ ತಂಗಿದ್ದ ಮನೆಯ ಮಾಲೀಕ ಹಾಗೂ ಆತನಿಗೆ ಬಾಂಬ್ ಸಾಗಿಸಲು ಸಹಕರಿಸಿದ ವಾಹನ ಚಾಲಕನನ್ನು ಸಂಬಂಧಿಸಿದ ಪ್ರಾಧಿಕಾರ ಬಂಧಿಸಿದೆ. ಕುವೈತ್‌ ಪ್ರಜೆಯಾದ ದಾಳಿಕೋರನನ್ನು ಆಂತರಿಕ ಸಚಿವಾಲಯ ‘ಉಗ್ರವಾದಿ ಮತ್ತು ವಕ್ರ ವಿಚಾರಗಳನ್ನು’ ಹೊಂದಿರುವವ ಎಂದಿದೆ.

ಬಂಧಿತ ವಾಹನದ ಚಾಲಕ ಅಬ್ದುಲರಹಮಾನ್ ಸಬಹ ಈಡನ್ ಸೌದ್‌ನನ್ನು 1989ರಿಂದ ಅಕ್ರಮವಾಗಿ ವಾಸಿಸುತ್ತಿರುವವನು ಹಾಗೂ ವಾಹನದ ಮಾಲೀಕನನ್ನು ‘ನೆಲೆ ಇಲ್ಲದ’ ನಿವಾಸಿ ಎಂದು ಗುರುತಿಸಿಕೊಳ್ಳಲಾಗಿದೆ.

Write A Comment