ರಾಷ್ಟ್ರೀಯ

ಛೇ.. ಅವರನ್ನು ಮದ್ವೆಯಾಗಿ ಎಲ್ಲಾ ಹಾಳಾಯ್ತು..!: ಆನ್‌ಲೈನ್‌ ಸಮೀಕ್ಷೆಯಲ್ಲಿ ವಿವಿಧ ಅಸಮಾಧಾನಗಳು ಬಹಿರಂಗ!

Pinterest LinkedIn Tumblr

341693-divorceಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅನ್ನೋದು ಹಿರಿಯರ ಅಂಬೋಣ. ಆದರೆ ಅಲ್ಲಿ ನಿಶ್ಚಯವಾದ್ದಕ್ಕೆ ಇಲ್ಲಿ ಕಷ್ಟ ಪಡಬೇಕು ಅನ್ನೋದು ತಮಾಷೆ! ಇದು ಕೆಲವರ ಪಾಲಿಗೆ ನಿಜವೂ ಹೌದು. ಸಮೀಕ್ಷೆಯೊಂದರ ಪ್ರಕಾರ ಶೇ.18ರಷ್ಟು ಮಂದಿ ಸಂಗಾತಿ ಆಯ್ಕೆಯಲ್ಲಿ ನಾವು ತಪ್ಪು ಮಾಡಿಕೊಂಡಿದ್ದೇವೆ. ಅವರನ್ನು ಮದ್ವೆ ಆಗಿ ಎಲ್ಲಾ ಹಾಳಾಯ್ತು ಎಂದು ಮಂಡೆಬಿಸಿ ಮಾಡ್ಕೊಂಡಿದ್ದಾರಂತೆ! ಅಚ್ಚರಿ ಎಂದರೆ ಹೀಗೆ ಹೇಳಿದವರಲ್ಲಿ 50 ವರ್ಷ ದಾಟಿದವರೇ ಹೆಚ್ಚಂತೆ

ಆನ್‌ಲೈನ್‌ ತಾಣವೊಂದು ಈ ಸಮೀಕ್ಷೆ ನಡೆಸಿದ್ದು ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೊಳಪಡಿಸಿದೆ. ಸಮೀಕ್ಷೆಯಲ್ಲಿ ಮದ್ವೆ, ಕೆಲಸ, ತಂದೆ ತಾಯಿಗಳ ಮೇಲಿನ ಪ್ರೀತಿ, ಸಂಪಾದನೆ ಇತ್ಯಾದಿ ವಿಚಾರಗಳ ಬಗ್ಗೆ ಕೇಳಿದೆ. ಅದರಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಐವರಲ್ಲಿ ಒಬ್ಬರು ಸಂಗಾತಿ ಸರಿಯಿಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ಉಳಿದಂತೆ ಶೇ.19ರಷ್ಟು ಮಂದಿ ನಿವೃತ್ತಿ ಬಳಿಕ ಬದುಕಿಗೆ ಸಂಪಾದನೆ ಉಳಿಸಿಕೊಂಡಿಲ್ಲ ಎಂದಿದ್ದಾರೆ. ಶೇ.16ರಷ್ಟು ಮಂದಿ ಕೆಲಸವೇ ಹೆಚ್ಚಾಗಿ ಮನೆಯವರನ್ನು ಮರೆತಿದ್ದೇವೆ ಎಂದು ಹೇಳಿದ್ದಾರೆ. ನಮ್ಮನ್ನು ನೋಡಿ ಜನ ಏನೆಂದುಕೊಳ್ಳುತ್ತಾರೋ ಎಂದು ಶೇ.15ರಷ್ಟು ಮಂದಿ ದುಃಖೀಸಿಯೂ ಇದ್ದಾರೆ ಎಂದೂ ಸಮೀಕ್ಷೆ ಹೇಳಿದೆ.

ಶೇ.18ರಷ್ಟು ಮಂದಿಗೆ ಸಂಗಾತಿ ಆಯ್ಕೆಯಲ್ಲಿ ತಪ್ಪಾಗಿದೆ ಎಂಬ ಚಿಂತೆ.

ಸಂಗಾತಿ ಆಯ್ಕೆಯಲ್ಲಿ ತಪ್ಪಾಗಿದೆ ಎಂದವರಲ್ಲಿ 50 ವರ್ಷ ಮೀರಿದವರೇ ಹೆಚ್ಚು.
-ಉದಯವಾಣಿ

Write A Comment