ಅಂತರಾಷ್ಟ್ರೀಯ

19 ದಿನಗಳಲ್ಲಿ 57 ಅಂತಸ್ತಿನ ಕಟ್ಟಡ ಕಟ್ಟಿದ ಚೀನಾ

Pinterest LinkedIn Tumblr

4012high-rise-china-gr_3239533k

ಅಗ್ಗದ ದರದ ವಸ್ತುಗಳ ಉತ್ಪಾದನೆಗೆ ಹೆಸರಾದ ಚೀನಾ ಇದೀಗ ತನ್ನ ಕೇಂದ್ರ ಪ್ರದೇಶದಲ್ಲಿ 19 ದಿನಗಳಲ್ಲಿ 57 ಅಂತಸ್ತಿನ ಗಗನಚುಂಬಿ ಕಟ್ಟಡ ಕಟ್ಟುವ ಮೂಲಕ ಹೊಸ ದಾಖಲೆ ಬರೆದಿದೆ.

ಚಾಂಗ್ಶಾದ ಹನನ್ ಪ್ರಾವಿಂಶಿಯಲ್ ರಾಜಧಾನಿಯಲ್ಲಿ ಮಾಡ್ಯುಲಾರ್ ವಿಧಾನದಿಂದ, ಗಾಜು ಮತ್ತು ಉಕ್ಕು ಬಳಸಿ ಪ್ರತಿ ದಿನ ಮೂರು ಅಂತಸ್ತುಗಳನ್ನು ಕಟ್ಟಿ ಈ ಸಾಧನೆ ಮಾಡಿದ್ದೇವೆ ಎಂದು ಕಟ್ಟಡ ನಿರ್ಮಾಣ ಸಂಸ್ಥೆಯಾದ ‘ದ ಬೋರ್ಡ್ ಸಸ್ಟೇನೇಬಲ್ ಬ್ಯುಲ್ಡಿಂಗ್ ಕಂಪನಿ’ ಹೇಳಿಕೊಂಡಿದೆ.

ಮಿನಿ ಸ್ಕೈ ಸಿಟಿ ಎಂಬ ಹೆಸರಿನ ಈ ಕಟ್ಟಡವನ್ನು ಬ್ಲಾಕ್ ಗಳನ್ನು ಜೋಡಿಸುವ ಮೂಲಕ ಕಟ್ಟಿ ಈ ದಾಖಲೆ ಸ್ಥಾಪಿಸಿದ್ದು, ಇದೀಗ ವಿಶ್ವದ ಅತಿ ದೊಡ್ಡ ಕಟ್ಟಡ ಅಂದರೆ 220 ಅಂತಸ್ತುಗಳ ಕಟ್ಟಡವನ್ನು ಮೂರು ತಿಂಗಳುಗಳಲ್ಲಿ ಕಟ್ಟುವ ಗುರಿಯನ್ನು ಈ ಸಂಸ್ಥೆ ಇಟ್ಟುಕೊಂಡಿದೆಯಂತೆ.

Write A Comment