ಮನೋರಂಜನೆ

ನಾಯಿ ಅಂದ್ರೆ ಭಯ ಅಂತಾಳೆ ಈ ನಟಿ ಕಾಜಲ್ ಅಗರವಾಲ್‍!

Pinterest LinkedIn Tumblr

4647Kajal_agarwal-2

ಇಂದಿನ ನಟಿ ಮಣಿಯರಿಗೆ ತಮ್ಮ ಬೆಸ್ಟ್ ಫ್ರೆಂಡ್ ಎಂದರೆ ನಾಯಿ. ಯಾಕೆಂದರೆ ಇವು ಅವರ ಜತೆ ಯಾವಾಗಲೂ ಇರುವಂತವು ! ಆದರೆ ನಟಿ ಕಾಜಲ್ ಅಗರವಾಲ್‍ ಮಾತ್ರ ಇದಕ್ಕೆ ತದ್ವಿರುದ್ದ. ನಾಯಿ ಅಂದರೆ ಈಕೆಗೆ ಭಯವಂತೆ ಯಾಕೆ ಅಂತೀರಾ ಈ ಸ್ಟೋರಿ ಓದಿ.

ಹೌದು. ಕಾಜಲ್ ಇಂದೂ ಸಹ ನಾಯಿ ಅಂದರೆ ಮಾರು ದೂರ ಓಡುತ್ತಾಳೆ. ನಾಯಿಯ ಕೋರೆ ಹಲ್ಲು ಎಂದರೆ ಈಕೆಗೆ ತುಂಬಾ ಭಯವಂತೆ. ಇದಕ್ಕೆ ಕಾರಣವೆಂದರೆ ಈಕೆ ಬಾಲ್ಯದಲ್ಲಿರುವಾಗ ಸಾಕು ನಾಯಿ ಕಚ್ಚಿತ್ತಂತೆ. ಅಂದಿನಿಂದ ನಾಯಿ ಕಂಡರೆ ಸಿಕ್ಕಾಪಟ್ಟೆ ಹೆದರುತ್ತಾಳೆ. ಆದರೆ ಚಿತ್ರವೊಂದರಲ್ಲಿ ನಾಯಿಯ ಜೊತೆ ಕಾಜಲ್ ಅಭಿನಯಿಸಬೇಕಾದ ದೃಶ್ಯವೊಂದಿತ್ತು. ಈ ಸೀನ್ ನಲ್ಲಿ ಮಾತ್ರ ತಾನು ನಟಿಸುವುದು ಕಷ್ಟ ಎಂದು ಕಾಜಲ್ ಮುಖ ಸಣ್ಣ ಮಾಡಿಕೊಂಡಳಂತೆ.

ತದನಂತರ ನಾಯಿಯ ಜೊತೆಗಿನ ಸನ್ನಿವೇಶಡ ಚಿತ್ರೀಕರಣಕ್ಕಾಗಿ ನಿರ್ದೇಶಕರು ಅವರ ಮನೆಯ ನಾಯಿಗಳ ಜೊತೆ ಒಡನಾಟವನ್ನು ಅಭ್ಯಾಸ ಮಾಡಿಸಿದ ಬಳಿಕ ತನ್ನ ಭಯವನ್ನು ಹೋಗಲಾಡಿಸಿಕೊಂಡು ಕಾಜಲ್ ಅಗರವಾಲ್ ಈ ಸೀನ್ ನಲ್ಲಿ ಅಭಿನಯಿಸಿದಳಂತೆ.

Write A Comment