ಅಂತರಾಷ್ಟ್ರೀಯ

ಬಿಸಿಗಾಳಿಗೆ ಪಾಕ್‌ನಲ್ಲಿ 400 ದಾಟಿದ ಸಾವಿನ ಸಂಖ್ಯೆ

Pinterest LinkedIn Tumblr

  Pakistan heat13

ಕರಾಚಿ, ಜೂ.23: ಕಳೆದ ಕೆಲವು ದಶಕಗಳಿಂದೀಚೆಗೆ ಇದೇ ಮೊದಲ ಬಾರಿಗೆ ಅತ್ಯಂತ ಭಯಾನಕವಾಗಿ ಬೀಸಿದ ಬಿಸಿಗಾಳಿಗೆ ಬಂದರು ನಗರಿ ಕರಾಚಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ನಿನ್ನೆಯಿಂದ ಮೃತಪಟ್ಟಿರುವವರ ಸಂಖ್ಯೆ ಇಂದು 400 ದಾಟಿದೆ. ಪರಿಸ್ಥಿತಿ ನಿಭಾಯಿಸಲು ಸೇನೆಯನ್ನು ನಿಯೋಜಿಸಲಾಗಿದೆ.

ರಂಜಾನ್ ಹಬ್ಬದ ಆರಂಭದೊಂದಿಗೆ ಬೀಸಿ ಬಂದ ಬಿಸಿಗಾಳಿ(ಹೀಟ್‌ವೇವ್) ಬರಬರುತ್ತಾ ಉಗ್ರರೂಪ ತಾಳಿದ್ದು, ನಿನ್ನೆ ಬೆಳಗ್ಗೆಯಿಂದ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ.

Pakistan heat12

Pakistan heat1

ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲಿ ನಡೆಯುತ್ತಿದೆ ಎಂದು ಸಿಂಧ್ ಪ್ರಾಂತ್ಯದ ಆಡಳಿತ ತಿಳಿಸಿದೆ. ಮೂರು ಪ್ರಮುಖ ಆಸ್ಪತರೆಗಳಲ್ಲಿ ನಿನ್ನೆ ರಾತ್ರಿವರೆಗೆ 341 ಜನ ಬಿಸಿಗಾಳಿಗೆ ಬಳಿಯಾಗಿದ್ದು, ಅಲ್ಲಿಂದೀಚೆಗೆ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನೂ ಸುಮಾರು 3 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನ ಬಿಸಿಗಾಳಿ ಮತ್ತು ಬಿಸಿಲಿನ ಝಳದಿಂದ ತೀವ್ರ ಅಸ್ವಸ್ಥರಾಗಿದ್ದು, ಅವರಿಗೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಸೇನಾ ಪಡೆಗಳಿಂದ ಅಲ್ಲಲ್ಲಿ ವಿಶೇಷ ಶಿಬಿರಗಳನ್ನು ತೆರೆದಿದ್ದು, ಅಲ್ಲಿಯೂ ಅನೇಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಸಿಂಧ್ ಪ್ರಾಂತ್ಯದ ಹಲವೆಡೆ ಬಿಸಿಗಾಳಿ ಮುಂದುವರಿದಿದೆ.

Write A Comment