ಅಂತರಾಷ್ಟ್ರೀಯ

ಡೆನ್ಮಾರ್ಕ್ ನಲ್ಲಿನ್ನು ‘ನೀಲಿ ಚಿತ್ರ’ಗಳ ಮೂಲಕ ಪಾಠ !

Pinterest LinkedIn Tumblr

949658education

ಲೈಂಗಿಕ ಶಿಕ್ಷಣದ ಕುರಿತು ಪರ ವಿರೋಧ ಕೇಳಿ ಬರುತ್ತಿರುವ ನಡುವೆಯೇ ಡೆನ್ಮಾರ್ಕ್ ದೇಶದ ಶಾಲೆಗಳಲ್ಲಿ ನೀಲಿ ಚಿತ್ರ ಪ್ರದರ್ಶಿಸಲು ಅಲ್ಲಿನ ಆಡಳಿತ ಮಂಡಳಿಗಳು ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಈಗ ನೀಡುತ್ತಿರುವ ಲೈಂಗಿಕ ಶಿಕ್ಷಣ ತೀರಾ ಕೆಳ ಮಟ್ಟದ್ದಾಗಿದ್ದು ಮಕ್ಕಳಿಗೆ ತುಂಬಾ ಬೋರ್ ಹೊಡೆಸುವಂತಿದೆ. ಅಲ್ಲದೇ ಸೌತೆಕಾಯಿಯಲ್ಲಿ ಕಾಂಡೂಮ್ ಗಳನ್ನು ಹಾಕಿ ಡೆಮೋ ತೋರಿಸುವುದನ್ನು ಯಾವ ವಿದ್ಯಾರ್ಥಿಗಳೂ ನೋಡಲು ಬಯಸುವುದಿಲ್ಲ. ಹಾಗಾಗಿ ಶಾಲಾ ಮಕ್ಕಳಿಗೆ ನೀಲಿ ಚಿತ್ರಗಳನ್ನು ತೋರಿಸಬೇಕೆಂದು ಅಲ್ಲಿನ ಅನೇಕ ಲೈಂಗಿಕ ಶಿಕ್ಷಣ ತಜ್ಞರು ಆಗ್ರಹಿಸಿದ್ದರು. ಹಾಗಾಗಿ ಸೂಕ್ತ ತರಬೇತಿ ಪಡೆದ ಶಿಕ್ಷಕರಿಂದ 8 ಮತ್ತು 9ನೇ ತರಗತಿಯ ಮಕ್ಕಳೊಂದಿಗೆ ಪೋರ್ನೋಗ್ರಫಿ ಬಗ್ಗೆ ಚರ್ಚೆ ನಡೆಯಬೇಕೆಂದು ಆಲ್ ಬೋರ್ಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ರಿಸ್ಟಿಯನ್ ಗ್ರಾಗಾರ್ಡ್ ತಿಳಿಸಿದ್ದಾರೆ.

ಅಲ್ಲದೇ ಹೈಸ್ಕೂಲ್ ಹಂತಕ್ಕೆ ಬಂದಿರುವ ಬಹುತೇಕ ಮಕ್ಕಳು ಅದಾಗಲೇ ಇಂತಹ ಚಿತ್ರಗಳನ್ನು ನೋಡಿಯೇ ನೋಡಿರುತ್ತಾರೆ. ಹಾಗಾಗಿ ಶಾಲೆಯಲ್ಲಿ ನೀಲಿ ಚಿತ್ರಗಳನ್ನು ತೋರಿಸಿದರೆ ಹಾಳಾಗಿಬಿಡುತ್ತಾರೆ ಎಂಬ ಭಯ ಬೇಕಿಲ್ಲ. ಲೈಂಗಿಕ ಶಿಕ್ಷಣ ನೀಡುವುದಕ್ಕಿಂತ ಪೋರ್ನ್ ಬಗ್ಗೆ ಅರಿವು ಮೂಡಿಸುವುದು ಉತ್ತಮ. ಅಷ್ಟೇ ಅಲ್ಲ, ನೈಜ ಜೀವನದಲ್ಲಿ ಸೆಕ್ಸ್ ಸಂಬಂಧಕ್ಕೂ ಪೋರ್ನ್ ಮೂವಿಗಳಿಗೂ ಇರುವ ವ್ಯತ್ಯಾಸಗಳನ್ನ ಮಕ್ಕಳು ಗುರುತಿಸುವಂತಾಗಬೇಕು ಎಂಬ ಅಭಿಪ್ರಾಯ ಶಿಕ್ಷಣ ತಜ್ಞರಿಂದ ಕೇಳಿ ಬಂದಿದ್ದು, ಇದೇ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

Write A Comment