ಅಂತರಾಷ್ಟ್ರೀಯ

ಅಫ್ಘಾನಿಸ್ತಾನ್ ಸಂಸತ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ; ಹಲವರು ಸಾವನ್ನಪ್ಪಿರುವ ಶಂಕೆ

Pinterest LinkedIn Tumblr

afagan

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಪದೇ ಪದೇ ದಾಳಿ ನಡೆಸುತ್ತಿರುವ ಉಗ್ರರು ಇಂದು ಸಂಸತ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಸಂಸತ್ ಭವನದ ಒಳಗೆ ನುಗಿದ್ದ ಉಗ್ರರು ಸುಮಾರು 9 ಕಡೆ ಬಾಂಬ್ ಸ್ಫೋಟಿಸಿದ್ದಾರೆ. ಅಲ್ಲದೆ ಸಂಸತ್ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ನಿಂತು ರಕ್ಷಣಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಕ್ಷಣಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ.

ಸದ್ಯ ಸಂಸತ್ ಆವರಣದಿಂದ ಸಂಸದರು ಹಾಗೂ ಪತ್ರಕರ್ತರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತಿಕೊಂಡಿದೆ. ಸದ್ಯ ಸಂಸತ್ ಆವರಣದಲ್ಲಿ ಉಗ್ರರು ಹಾಗೂ ರಕ್ಷಣಾ ಪಡೆಗಳ ಮಧ್ಯೆ ಗುಂಡಿನ ಚಕಮಿಕಿ ನಡೆಯುತ್ತಿದೆ.

ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮತ್ತೆ ಹಲವು ಸಂಸದರಿಗೆ ಗಾಯಗಳಾಗಿವೆ. ಸದ್ಯ ಸಂಸತ್ ಭವನದ ಸುತ್ತ ದಟ್ಟ ಹೊಗೆ ಆವರಿಸಿದೆ.

Write A Comment