ಅಂತರಾಷ್ಟ್ರೀಯ

ಲಲಿತ್ ಮೋದಿ ಪ್ರಯಾಣಕ್ಕೆ ಬ್ರಿಟನ್ ರಾಜಮನೆತನದ ನೆರವು: ವರದಿ

Pinterest LinkedIn Tumblr

1010-2-2-LALIT-MODIಲಂಡನ್: ಭಾರತದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಲಸೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಬ್ರಿಟನ್‌ನಿಂದ ಪ್ರಯಾಣಿಸಲು ದಾಖಲೆಗಳನ್ನು ಪಡೆಯಲು ಲಲಿತ್ ಮೋದಿಗೆ ರಾಜಮನೆತನ ಸಹಕರಿಸಿತ್ತು ಎಂದು ಭಾನುವಾರ ಮಾಧ್ಯಮವೊಂದು ವರದಿ ಮಾಡಿದೆ.

‘ಸಂಡೇ ಟೈಮ್ಸ್’ ವರದಿಯ ಪ್ರಕಾರ, ರಾಣಿ ಎಲಿಜಬೆತ್ ಅವರ ಎರಡನೇ ಮಗ ಯೋರ್ಕ್‌ನ ರಾಜ ಆಂಡ್ರ್ಯೂ ಮತ್ತು ಲಲಿತ್ ಮೋದಿಗೂ ಹಲವು ವರ್ಷಗಳ ಗೆಳೆತನವಿದ್ದು, ಮೋದಿಯ ಪ್ರಯಾಣ ದಾಖಲೆಗಳು ಅಂತಿಮಗೊಂಡ ದಿನ ಮುಂಚೆ ಅವರಿಬ್ಬರು ಭೇಟಿಯಾಗಿದ್ದರು.

ಆದರೆ, ಅವರಿಬ್ಬರು ವಲಸೆ ವಿಷಯವನ್ನು ಚರ್ಚಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಬಂಕಿಂಗ್‌ಹ್ಯಾಮ್ ಅರಮನೆ ತಿರಸ್ಕರಿಸಿದ್ದು, ಮೋದಿ ವಲಸೆ ದಾಖಲೆಗಳನ್ನು ಸಿದ್ಧಪಡಿಸಲು ರಾಜ ಬ್ರಿಟನ್ ಸರಕಾರದ ಮೇಲೆ ಪ್ರಭಾವ ಬೀರಿದ್ದಾನೆ ಎಂಬುದನ್ನೂ ನಿರಪೇಕ್ಷವಾಗಿ ನಿರಾಕರಿಸಿದೆ.

ಬ್ರಿಟನ್ ಮೂಲದ ಪತ್ರಿಕೆಯೊಂದು ಲಲಿತ್ ಮೋದಿ ವಲಸೆ ದಾಖಲೆ ಪಡೆಯಲು, ಭಾರತೀಯ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನೆರವು ಪಡೆದಿದ್ದರು ಎಂದು ಪ್ರಕಟಿಸಿದ ವರದಿ, ದೇಶದ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Write A Comment