ರಾಷ್ಟ್ರೀಯ

ನಕಲು ಪದವಿ ವಿವಾದ: ತಿಹಾರ್ ಜೈಲಿಗೆ ತೋಮರ್

Pinterest LinkedIn Tumblr

tomar

ಹೊಸದಿಲ್ಲಿ: ನಕಲು ಪದವಿ ಪ್ರಮಾಣ ಪತ್ರ ಆರೋಪದಡಿ ಬಂಧಿತರಾಗಿರುವ ದಿಲ್ಲಿ ಮಾಜಿ ಸಚಿವ ಜಿತೇಂದರ್ ಸಿಂಗ್ ತೋಮರ್ ಅವರನ್ನು ಭಾನುವಾರ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

ಎರಡು ದಿನಗಳ ಪೊಲೀಸ್ ಕಸ್ಟಡಿ ಕೊನೆಗೊಂಡ ಕಾರಣ ತೋಮರ್ ಅವರನ್ನು ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಜೂ.9ರಂದು ಬಂಧಿತರಾದಗಿನಿಂದಲೂ ತೋಮರ್ ಪೊಲೀಸ್ ಬಂಧನದಲ್ಲಿದ್ದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಿರಿ ಸಹಿ ಪಡೆಯುವ ಅಗತ್ಯವಿದ್ದು, ಆರೋಪಿಯನ್ನು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,’ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಂಕಿತ್ ಸಿಂಗ್ಲಾ ಹೇಳಿದರು.

ಆದರೆ, ತೋಮರ್ ಅವರ ಮಾದರಿ ಸಹಿ ಪಡೆಯುವಾಗ ಸಾಕ್ಷಿಯಾಗುವಂತೆ ದಿಲ್ಲಿ ಪೊಲೀಸರು ಮ್ಯಾಜಿಸ್ಟ್ರೇಟ್ ಅವರನ್ನು ಆಗ್ರಹಿಸಿದಾಗ, ಅವರು ವೈಯಕ್ತಿಕ ಕಾರಣಗಳಿಂದ ನಿರಾಕರಿಸಿದರು. ಈ ಸಂಬಂಧ ಈಗಾಗಲೇ ಮುಖ್ಯ ನ್ಯಾಯಧೀಶರೊಂದಿಗೆ ಮಾತನಾಡಿರುವುದಾಗಿಯೂ ಹೇಳಿದರು.

ಮಾದರಿ ಸಹಿ ಅರ್ಜಿ ಮತ್ತು ಇತರೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ತನಿಖಾಧಿಕಾರಿಗೆ ಮ್ಯಾಜಿಸ್ಟ್ರೇಟ್ ಸೂಚಿಸಿದರು.

ಸೋಮವಾರ ತೋಮರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅದನ್ನೂ ಮ್ಯಾಜಿಸ್ಟ್ರೇಟ್ ನಡೆಸಲು ನಿರಾಕರಿಸಿದ್ದು, ಮುಖ್ಯ ಮ್ಯಾಜಿಸ್ಟ್ರೇಟ್ ಅವರಿಗೇ ವಿಚಾರಣೆಯನ್ನು ವರ್ಗಾಯಿಸಿದ್ದಾರೆ.

ತೋಮರ್ ಅವರ ಕಸ್ಟಡಿಯ ಅಗತ್ಯ ಇನ್ನಿಲ್ಲ ಎಂದು ದಿಲ್ಲಿ ಪೊಲೀಸರು ಕೋರ್ಟ್‌ಗೆ ಹೇಳಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಎಂದಿದ್ದರು. ಮಾದರಿ ಸಹಿ ಸಂಗ್ರಹಿಸುವ ಅರ್ಜಿ ನ್ಯಾಯಧೀಶರ ಮುಂದಿರುವುದರಿಂದ ತೋಮರ್ ಅವರನ್ನು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮ್ಯಾಜಸ್ಟ್ರೇಟ್ ಸೂಚಿಸಿದ್ದರು.

ವಿಚಾರಣೆ ನಂತರ ತೋಮರ್ ಅವರನ್ನು ಬಿಗಿ ಭದ್ರತೆಯಲ್ಲಿ ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು.

ವಕೀಲರಾದ ಹರ್ಶಿತ್ ಜೈನ್ ಮೂಲಕ ವಿಚಾರಣೆ ವೇಳೆ ತೋಮರ್ ಭದ್ರತಾ ದೃಷ್ಟಿಯಿಂದ ಅವರನ್ನು ಪ್ರತ್ಯೇಕ ಕೋಣೆಯಲ್ಲಿರಸಬೇಕು ಮತ್ತು ಜೈಲಿಗೆ ಪ್ರತ್ಯೇಕ ವಾಹನದಲ್ಲಿ ಕರೆದೊಯ್ಯಬೇಕೆಂದು ಅಧೀಕ್ಷಕ ಮೇಲ್ವಿಚಾರಕರಿಗೆ ಸೂಚಿಸಬೇಕೆಂದು ಆಗ್ರಹಿಸಿದ್ದರು.

Write A Comment