ಅಂತರಾಷ್ಟ್ರೀಯ

ಪ್ರಯಾಣ ದಾಖಲೆಗಾಗಿ ಹೆಸರು ಬದಲಿಸಿಕೊಂಡಿದ್ದ ಲಲಿತ್ ಮೋದಿ!

Pinterest LinkedIn Tumblr

lalit_modi

ಲಂಡನ್: ವಿವಾದಿತ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿದೇಶ ಪ್ರಯಾಣ ಸಂಬಂಧ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದ ವಿಚಾರ ಬಹಿರಂಗವಾಗಿದೆ.

ಬ್ರಿಟೀಷ್ ಮೂಲದ ಮಾಧ್ಯಮ ವರದಿ ಮಾಡಿರುವಂತೆ ಬ್ರಿಟಿಷ್ ಸರ್ಕಾರಕ್ಕೆ ಲಲಿತ್ ಮೋದಿ ಸಲ್ಲಿಕೆ ಮಾಡಿರುವ ದಾಖಲೆಗಳಲ್ಲಿ ಅವರು ತಮ್ಮ ಹೆಸರನ್ನು ಪ್ರಿನ್ಸ್ ಚಾರ್ಲ್ಸ್ ಎಂದೂ ಮತ್ತು ತಮ್ಮ ಸಹೋದರನ ಹೆಸರನ್ನು ಆ್ಯಂಡ್ರ್ಯೂ ಎಂದು ಹೇಳಿದ್ದಾರಂತೆ. ಪತ್ರಿಕೆ ವರದಿಗಳ ಪ್ರಕಾರ ಆ್ಯಂಡ್ರ್ಯೂ 2ನೇ ಕ್ವೀನ್ ಎಲಿಜೆಬೆತ್ ಅವರ 2ನೇ ಪುತ್ರನಾಗಿದ್ದು, ಲಲಿತ್ ಮೋದಿ ಹಲವು ವರ್ಷಗಳಿಂದ ಆ್ಯಂಡ್ಯ್ರೂಗೆ ಪರಿಚಿತರಾಗಿದ್ದರು. ಅಲ್ಲದೆ ಹಲವು ಬಾರಿ ಆ್ಯಂಡ್ರ್ಯೂ ಲಲಿತ್ ಮೋದಿ ಅವರನ್ನು ಭೇಟಿಯಾಗಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬ್ರಿಟಿಷ್ ಪತ್ರಿಕೆಯ ಈ ವರದಿ ಇದೀಗ ಭಾರತ ಮತ್ತು ಇಂಗ್ಲೆಂಡ್ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದು, ಬಕಿಂಗ್ ಹ್ಯಾಮ್ ಅರಮನೆಯ ಆಡಳಿತ ಮಂಡಳಿ ಈ ವರದಿಯನ್ನು ತಿರಸ್ಕರಿಸಿದೆ.

ಭಾರತದಲ್ಲಿ ಇದೇ ಲಲಿತ್ ಮೋದಿ ಪ್ರಕರಣ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು, ಮೋದಿಗೆ ಸಹಾಯ ಮಾಡಿದ ಆರೋಪಕ್ಕೆ ಗುರಿಯಾಗಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ರಾಜಸ್ತಾನ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು ಅವರ ವಿರುದ್ಧವೂ ವಿಪಕ್ಷಗಳು ಟೀಕಾ ಪ್ರಹಾರವನ್ನೇ ಹರಿಸುತ್ತಿವೆ.

Write A Comment