ರಾಷ್ಟ್ರೀಯ

ಭಯೋತ್ಪಾದಕ, ಬಾಂಬ್ ದಾಳಿಯಿಂದ 25 ವರ್ಷಗಳಲ್ಲಿ 2,000 ಕ್ಕೂ ಹೆಚ್ಚು ಸಾವು

Pinterest LinkedIn Tumblr

attackನವದೆಹಲಿ: 1989 ರಿಂದ ಈ ವರೆಗೂ ನಡೆದಿರುವ ಭಯೋತ್ಪಾದಕರ ದಾಳಿ ಹಾಗೂ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭದ್ರತಾ ಸಿಬ್ಬಂದಿಗಳೂ ಸೇರಿ ಒಟ್ಟು 2,000 ಜನರು ಮೃತಪಟ್ಟಿದ್ದಾರೆ ಎಂದು ಕೆಂದ್ರ ಗೃಹ ಇಲಾಖೆ ತಿಳಿಸಿದೆ.

ಆರ್.ಟಿ.ಐ ಅರ್ಜಿಯೊಂದಕ್ಕೆ ಗೃಹ ಇಲಾಖೆ ನೀಡಿರುವ ಉತ್ತರದಿಂದ ಈ ಅಂಕಿ ಅಂಶ ಬಹಿರಂಗವಾಗಿದ್ದು, 1989 ರಿಂದ 2015 ರ ಮೇ.31 ವರೆಗೆ 2129 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ 1993 ರ ಮುಂಬೈ ಸರಣಿ ಸ್ಫೋಟ, 26 /11 ರ ಮುಂಬೈ ನಲ್ಲಿ ನಡೆದ ಭಯೋತ್ಪಾದಕರ ದಾಳಿ, 1998 ರ ಕೊಯಂಬತ್ತೂರು ಸರಣಿ ಸ್ಫೋಟ ಪ್ರಕರಣ, 2005 ರ ದೆಹಲಿ ಸ್ಪೋಟ ಪ್ರಕರಣ, 2006 ರ ವಾರಾಣಸಿ ಸ್ಫೋಟ, 2007 ರ ಸಂಜೋತಾ ಎಕ್ಸ್ ಪ್ರೆಸ್, 2008 ರ ಗುವಾಹಟಿ ಬಾಂಬ್ ಸ್ಫೋಟ ಪ್ರಕರಣ, 2010 ರ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗೃಹ ಇಲಾಖೆ ವರದಿ ಹೇಳಿದೆ.

ಇದೆ ವೇಳೆ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಭದ್ರತಾ ಯೋಜನೆಗಳಿಗಾಗಿ ಕಳೆದ 5 ವರ್ಷಗಳಲ್ಲಿ 595 ಕೋಟಿ ರೂಪಾಯಿ ನೀಡಲಾಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

Write A Comment