ಅಂತರಾಷ್ಟ್ರೀಯ

ಮಕ್ಕಳ ಹತ್ಯೆ ಮಾಡಿ ಫ್ರಿಜರ್‌ನಲ್ಲಿ ಬಚ್ಚಿಟ್ಟ ಅಮೆರಿಕದ ತಾಯಿ

Pinterest LinkedIn Tumblr

body

ಕೆಟ್ರಾಯಿಟ್, ಜೂ.20: ತನ್ನ ಇಬ್ಬರು ಮಕ್ಕಳನ್ನು ಕೊಂದು, ಶೈತ್ಯಾಗಾರದಲ್ಲಿ ಬಚ್ಚಿಟ್ಟಿರುವುದಾಗಿ ತಾಯಿಯೊಬ್ಬಳು ತಪ್ಪೊಪ್ಪಿಕೊಂಡಿದ್ದಾಳೆ.

9 ವರ್ಷದ ಗಂಡು ಹಾಗೂ 13 ವರ್ಷದ ಹೆಣ್ಣುಮಗುವಿನ ಮೃತದೇಹಗಳು ಶೈತ್ಯಾಗಾರದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತಾಯಿ ಮಿಶೆಲ್ ಬ್ಲೇರ್‌ಳನ್ನು ಕಳೆದ ಮಾರ್ಚ್‌ನಲ್ಲಿ ಪೊಲೀಸರು ಬಂಧಿಸಿದ್ದರು.

ಈಕೆಯ ಇನ್ನಿಬ್ಬರು ಮಕ್ಕಳು ಘಟನೆ ಸಂದರ್ಭದಲ್ಲಿ ನೆರೆಯ ಮನೆಯಲ್ಲಿದ್ದುದರಿಂದ ಪಾರಾಗಿದ್ದಾರೆ. ಇಬ್ಬರು ಮಕ್ಕಳನ್ನು ಮನಬಂದಂತೆ ಥಳಿಸಿ, ಕೊಂದು ನಂತರ ಸುಟ್ಟು ಶೈತ್ಯಾಗಾರದಲ್ಲಿರಿಸಿದ್ದಳು. ಇದೀಗ ನ್ಯಾಯಾಲಯದ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

Write A Comment