ಅಂತರಾಷ್ಟ್ರೀಯ

ಪರ್ವೇಜ್ ಮುಷರಫ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌

Pinterest LinkedIn Tumblr

Pervez-Musharraf

ಇಸ್ಲಾಮಾಬಾದ್: ಮೌಲ್ವಿ ಅಬ್ದುಲ್‌ ರಷೀದ್‌ ಘಾಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್‌ ಮುಷರಫ್‌ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್‌ ಜಾರಿಯಾಗಿದೆ.

ನ್ಯಾಯಾಲಯಕ್ಕೆ ಖುದ್ದು ಹಾಜರಾಗುವ ಕಾಲಾವಧಿಯನ್ನು ವಿಸ್ತರಿಸುವಂತೆ ಸಲ್ಲಿಸಿದ ಮನವಿ ಅರ್ಜಿಯನ್ನು ವಜಾಗೊಳಿಸಿದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕಮರನ್‌ ಬುಷರತ್‌ ಮುಫ್ತಿ ಅವರು ಮುಷರಫ್‌ ವಿರುದ್ಧ ಬಂಧನದ ವಾರಂಟ್‌ ಜಾರಿ ಮಾಡಿದ್ದು, ಮುಷರಫ್‌ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ನುಣುಚಿಕೊಳ್ಳುತ್ತಾ ಬಂದಿರುವ ಮುಷರಫ್ ಸದ್ಯ ಕರಾಚಿಯ ತಮ್ಮ ಮಗಳ ಮನೆಯಲ್ಲಿದ್ದಾರೆ.

ಪಾಕಿಸ್ತಾನದಲ್ಲಿ 2007ರಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಮೌಲ್ವಿ ಅಬ್ದುಲ್ ರಷೀದ್ ಘಾಜಿ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಮೃತ ಮೌಲ್ವಿ ಕುಟುಂಬದ ಸದಸ್ಯರು ಮುಷರಫ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ.

Write A Comment