ರಾಷ್ಟ್ರೀಯ

ವೇಗ ಚಾಲನೆ: ದೆಹಲಿ ಉಪಮುಖ್ಯಮಂತ್ರಿ ಚಾಲಕನಿಗೆ ದಂಡ

Pinterest LinkedIn Tumblr

manish-sisodia-pti

ನವದೆಹಲಿ: ಕಳೆದ ವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಅವರ ಕಾರು ನಿರ್ಭಂದನೆಗಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತಿದ್ದಕ್ಕೆ ಉಪಮುಖ್ಯಮಂತ್ರಿಗಳ ಚಾಲಕನಿಗೆ ದಂಡ ಹಾಕಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಪೂರ್ವ ದೆಹಲಿಯ ಖಜೂರಿ ತಿರುವಿನ ಬಳಿ ತೆರಳುವಾಗ ಕಾರು ಅತಿ ವೇಗವಾಗಿ ಚಲಿಸುತ್ತಿತ್ತು ಎಂದು ತಿಳಿದುಬಂದಿದೆ. ಆಗ ಕಾರಿನ ಹಿಂಬದಿಯಲ್ಲಿ ಸಿಸೋಧಿಯಾ ಆಸೀನರಾಗಿದ್ದರು ಎಂದು ಕೂಡ ತಿಳಿದುಬಂದಿದೆ.

“ಜೂನ್ ೧೨ ರ ಸಂಜೆ ನಮ್ಮ ತನಿಖಾ ವಾಹನ ಸಿಸೋಧಿಯಾ ಅವರ ಕಾರು ಅತಿ ವೇಗವಾಗಿ ಚಲಿಸುತ್ತಿದ್ದನ್ನು ಕಂಡುಹಿಡಿದಿದ್ದಕ್ಕೆ ೪೦೦ ರೂ ದಂಡ ಹಾಕಲಾಗಿದೆ” ಎಂದು ಜಂಟಿ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಗೋಯಲ್ ತಿಳಿಸಿದ್ದಾರೆ.

ವೇಗವಾಗಿ ಚಲಿಸುತ್ತಿದ್ದ ಕಾರಿನ ನೊಂದಣಿ ಸಂಖ್ಯೆ ಡಿ ಎಲ್ ೧೦ ಸಿಎ೦೦೧೭ ತಡೆ ಹಾಕಿ ದಂಡ ಹೇರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ತಡೆ ಹಾಕಿದಾಗ ಕಾರು ನಿಲ್ಲಿಸಲಿಲ್ಲ. ಆದುದರಿಂದ ಬೈಕಿನಲ್ಲಿದ್ದ ಸಂಚಾರಿ ಕಾಂಸ್ಟೆಬಲ್ ಕಾರನ್ನು ಅಟ್ಟಿಸಿಕೊಂಡು ಹೋಗಿ ಟಿಕೆಟ್ ನೀಡಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಇಲ್ಲಿಯವರೆಗೂ ಎಷ್ಟು ವಿಐಪಿಗಳಿಗೆ ದಂಡ ಹಾಕಿದ್ದೀರಿ ಎಂಬ ಪ್ರಶ್ನೆಗೆ ಗೋಯಲ್ ಅವರು “ಯಾವುದೇ ವಿಐಪಿಗೆ ಇತ್ತೀಚೆಗೆ ದಂಡ ಹಾಕಿರುವುದನ್ನು ನೆನಪಿಸಿಕೊಳ್ಳುವುದು ಕಷ್ಟ” ಎಂದಿದ್ದಾರೆ.

ಸಾಮಾನ್ಯವಾಗಿ ಚಾಲಕರ ಹೆಸರಿನಲ್ಲಿ ದಂಡ ಹಾಕುವುದರಿಂದ ವಿಐಪಿಗಳ ಹೆಸರುಗಳನ್ನು ನೆನಪಿಸಿಕೊಳ್ಳುವುದು ಕಷ್ಟ ಎಂದು ನಂತರ ಅವರು ಸ್ಪಷ್ಟೀಕರಿಸಿದ್ದಾರೆ.

Write A Comment