ಅಂತರಾಷ್ಟ್ರೀಯ

ಅಮೆಜಾನ್‌ನಿಂದ ಡ್ರೋನ್‌ ಡೆಲಿವರಿ ?

Pinterest LinkedIn Tumblr

Amazon-Launches-its-marketplace-in-India-Amazon-in

ವಾಷಿಂಗ್ಟನ್‌: ಆನ್‌ಲೈನ್‌ ಮೂಲಕ ಕೊಂಡ ವಸ್ತುಗಳನ್ನು 30 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ತಲುಪಿಸುವಂಥ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಿರುವುದಾಗಿ ಅಮೆರಿಕದ ಆನ್‌ಲೈನ್‌ ದಿಗ್ಗಜ ಅಮೆಜಾನ್‌ ಹೇಳಿದೆ.

ಗ್ರಾಹಕರಿಗೆ ಅತಿ ವೇಗವಾಗಿ ಉತ್ಪನ್ನಗಳನ್ನು ತಲುಪಿಸಲು ಕಮರ್ಷಿಯಲ್‌ ಡ್ರೋನ್‌ ಬಳಕೆ ಕನಸಿನ ಮಾತಲ್ಲ ಎಂದು ಅಮೆಜಾನ್‌ ಹೇಳಿದ್ದರೂ, ಡ್ರೋನ್‌ ಮೂಲಕ ಪಾರ್ಸಲ್‌ ಕಳುಹಿಸುವ ತಂತ್ರಜ್ಞಾನದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

‘ಈ ತಂತ್ರಜ್ಞಾನ ಬಳಕೆಗೆ ಸರಕಾರದ ಒಪ್ಪಿಗೆ ದೊರೆತರೆ, ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ವಸ್ತುಗಳು ತ್ವರಿತವಾಗಿ ಗ್ರಾಹಕರ ಕೈ ಸೇರುವುದು. ಸಣ್ಣ ವಸ್ತು ಕೊಳ್ಳಲು ಗ್ರಾಹಕರು ಅಂಗಡಿಗೆ ಹೋಗುವುದು ಅಥವಾ ಮಾರಾಟಗಾರರು ಅದನ್ನು ಮನೆ ಅಥವಾ ಕಚೇರಿಗೆ ತಲುಪಿಸುವುದಕ್ಕಿಂತ ತ್ವರಿತವಾಗಿ ಈ ಡ್ರೋನ್‌ಗಳು ನಿರ್ದಿಷ್ಟ ಸ್ಥಳ ತಲುಪುತ್ತವೆ. ಈ ತಂತ್ರಜ್ಞಾನ ಮಿತವ್ಯಯಕಾರಿಯೂ ಹೌದು,’ ಎಂದು ಅಮೆಜಾನ್‌ ಉಪಾಧ್ಯಕ್ಷ ಪಾಲ್‌ಇ ಮಿಸೆನೆರ್‌ ತಿಳಿಸಿದ್ದಾರೆ.

ಕಮರ್ಷಿಯಲ್‌ ಡ್ರೋನ್‌ ಬಳಕೆಯನ್ನು ನಿರ್ಬಂಧಿಸುವ ಪ್ರಸ್ತಾವನೆಯನ್ನು ಫೆಡರಲ್‌ ಏವಿಯೇಷನ್‌ ಕಳೆದ ಫೆಬ್ರವರಿಯಲ್ಲೇ ಮಂಡಿಸಿತ್ತು. ಹಾಗಾಗಿ ಅಮೆಜಾನ್‌ನ ಈ ಪ್ರಸ್ತಾವನೆಗೆ ಎಫ್‌ಎಎ ಅನುಮೋದನೆ ದೊರೆಯುವುದು ಅನುಮಾನ ಎನ್ನಲಾಗಿದೆ.

Write A Comment