ಅಂತರಾಷ್ಟ್ರೀಯ

ಎದೆ ಹಾಲಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಈಗ ಭಾರಿ ಬೇಡಿಕೆ ! ಏಕೆ ಎಂಬುದನ್ನು ಇಲ್ಲಿ ಓದಿ

Pinterest LinkedIn Tumblr

Breast_Milk

ನ್ಯೂಯಾರ್ಕ್: ಆನ್‌ಲೈನ್ ಮಾರುಕಟ್ಟೆಯಲ್ಲಿ ಈಗ ತಾಯಿಯ ಎದೆ ಹಾಲಿಗೆ ವ್ಯಾಪಕ ಬೇಡಿಕೆ ಇದೆ. ಈ ಬೇಡಿಕೆ ಇರುವುದು ತಾಯಿಯ ಎದೆಹಾಲಿನಿಂದ ವಂಚಿತರಾದ ಮಕ್ಕಳಿಗೆ ಮಾತ್ರವಲ್ಲ ಕ್ರೀಡಾಪಟುಗಳಿಗೂ ಕೂಡ ಎಂದಿದೆ ‘ಬ್ರೆಸ್ಟ್‌ಫೀಡಿಂಗ್ ಮೆಡಿಸಿನ್’ ಪತ್ರಿಕೆ.

ಅಂತರ್ಜಾಲ ಆಧಾರಿತ ಮಾರುಕಟ್ಟೆಯಲ್ಲಿ ತಾಯಿಯ ಎದೆ ಹಾಲಿನ ಮಾರಾಟ ಇಂದು ಉದ್ಯಮವಾಗಿ ಬೆಳೆಯುತ್ತಿದೆ. ಅಂದಹಾಗೆ ಬ್ರೆಸ್ಟ್ ಮಿಲಕ್ಕಕ ಮಕ್ಕಳಿಗೆ ಮಾತ್ರವಲ್ಲದೆ, ದೇಹದಾರ್ಡ್ಯ ಸ್ಪರ್ಧಿಗಳು ಮತ್ತು ಕ್ರೀಡಾಪಟುಗಳಿಗೆ ‘ನ್ಯಾಚುರಲ್ ಸೂಪರ್‌ಫುಡ್’ ರೀತಿಯಲ್ಲಿ ಗುರುತಿಸಿಕೊಂಡಿದ್ದು, ವ್ಯಾಪಕವಾಗಿ ಮಾರಾಟವಾಗುತ್ತಿದೆ ಎಂದು ಪತ್ರಿಕೆಯ ಸಂಪಾದಕೀಯ ತಿಳಿಸಿದೆ.

”ಬ್ರೆಸ್ಟ್ ಮಿಲ್ಕ್ ಇಂದು ಪರಿಪೂರ್ಣ ಮಾರಾಟದ ವಸ್ತುವಾಗಿದೆ,” ಎನ್ನುತ್ತಾರೆ ಬ್ರೆಸ್ಟ್‌ಫೀಡಿಂಗ್ ಮೆಡಿಸಿನ್ ಪತ್ರಿಕೆಯ ಸಂಪಾದಕರಾದ ಆರ್ಥರ್ ಈಡಲ್ಮನ್. ”ಇಂದು ಮಹಿಳೆಯರು ಸ್ತನ್ಯಪಾನದ ವ್ಯವಾಹಾರಿಕ ಮೌಲ್ಯವನ್ನು ಅರಿತಿದ್ದಾರೆ. ಈ ಬೆಳವಣಿಗೆಯಿಂದಾಗಿ ಲಾಭಾಪೇಕ್ಷೆ ಇಲ್ಲದೆ ತಾಯಿಯ ಎದೆ ಹಾಲನ್ನು ದಾನ ಪಡೆದು ಸಂಗ್ರಹಿಸುತ್ತಿದ್ದ ಹ್ಯೂಮನ್ ಬ್ರೆಸ್ಟ್ ಮಿಲ್ಕ್ ಬ್ಯಾಂಕ್‌ಗಳಿಗೆ ಹಿನ್ನಡೆಯಾಗಿದೆ,” ಎಂದು ಆರ್ಥರ್ ಹೇಳಿದ್ದಾರೆ.

”ಅಂದಹಾಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತಹ ಬ್ರೆಸ್ಟ್ ಮಿಲ್ಕ್ ಕುರಿತಾಗಿ ಎಚ್ಚರ ವಹಿಸಬೇಕು. ಏಕೆಂದರೆ, ಹಸುವಿನ ಹಾಲು ಹಾಗೂ ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ಕಲಬೆರಿಕೆಯಾಗಿರುವ ಸಾಧ್ಯತೆಗಳು ಹೆಚ್ಚಿರುತ್ತದೆ.” ಎಂದು ಸಂಪಾದಕೀಯದಲ್ಲಿ ಎಚ್ಚರಿಸಲಾಗಿದೆ.

Write A Comment