ಅಂತರಾಷ್ಟ್ರೀಯ

ಅಮೆರಿಕಾ ದಾಳಿಗೆ ಬಲಿಯಾದ ಲಾಡೆನ್ ಆಪ್ತ

Pinterest LinkedIn Tumblr

991Drone-attack

ದುಬೈ: ಅಮೆರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಒಸಾಮಾ ಬಿನ್ ಲಾಡೆನ್ ಆಪ್ತ ಕಾರ್ಯದರ್ಶಿಯಾಗಿದ್ದ ಯೆಮೆನ್ ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ನಾಸಿರ್ ಅಲ್ ವಾಹಿಶಿ ಮೃತಪಟ್ಟಿದ್ದಾನೆ.

ಒಸಾಮಾ ಬಿನ್ ಲಾಡೆನ್ ಹತ್ಯೆಯ ಬಳಿಕ ಅಮೆರಿಕಾ ಪಡೆಗಳು ನಾಸಿರ್ ನನ್ನು ಬಲಿ ಪಡೆದಿರುವುದರಿಂದ ಅಲ್ ಖೈದಾ ಸಂಘಟನೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಐಸಿಸ್ ಉಗ್ರರ ದಾಳಿಯಿಂದಲೂ ತತ್ತರಿಸಿರುವ ಅಲ್ ಕೈದಾ ಈಗ ಮುಖ್ಯಸ್ಥನನ್ನು ಕಳೆದುಕೊಳ್ಳುವ ಮೂಲಕ ಮತ್ತಷ್ಟು ಹಿನ್ನೆಡೆಗೊಳಗಾಗಿದೆ ಎನ್ನಲಾಗಿದೆ.

ನಾಸೀರ್ ಸಾವನ್ನು ಅಲ್ ಕೈದಾ ಸಂಘಟನೆಯೂ ಖಚಿತಪಡಿಸಿದ್ದು, ಅಮೆರಿಕಾ ವಿರುದ್ದದ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಅಮೆರಿಕಾ ವಿರುದ್ದದ ತಮ್ಮ ಯುದ್ದ ಮುಂದುವರೆಸುವುದಾಗಿ ಶಪಥ ಮಾಡಿದೆ.

Write A Comment