ಅಂತರಾಷ್ಟ್ರೀಯ

ಚಾಟಿಂಗ್ ನಲ್ಲಿಯೇ ಲಕ್ಷಗಟ್ಟಲೆ ಸಂಪಾದಿಸುವ ಚಾಟಿಂಗ್ ಕನ್ಯೆಯರು !!

Pinterest LinkedIn Tumblr

48004715china-girl-e1429788721467

ಚೀನಾದಲ್ಲಿ ಚಾಟಿಂಗ್ ಹೆಚ್ಚುತ್ತಿದ್ದು ಹಲವರು ‘ನೆಮ್ಮದಿ’ಗಾಗಿ ಚಾಟಿಂಗ್ ಗೆ ಮೊರೆ ಹೋಗುತ್ತಾರಂತೆ. ಪರಿಣಾಮ ಜನರ ನೆಮ್ಮದಿಯ ಹೆಸರಿನಲ್ಲಿ ಚಾಟಿಂಗ್ ವೆಬ್ ಸೈಟ್ ಗಳು ಹುಟ್ಟಿಕೊಳ್ಳುತ್ತಿದ್ದು ಕೋಟಿಗಟ್ಟಲೆ ಆದಾಯ ಗಳಿಸುತ್ತಿವೆ. ಇದಕ್ಕಾಗಿಯೇ ಚೆಂದುಳ್ಳಿ ಚೆಲುವೆಯರಿಗೆ ಲಕ್ಷಗಟ್ಟಲೆ ಸಂಬಳ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದೆ.

ಚೀನಾದಲ್ಲಿ ಈ ಚೆಲುವೆಯರಿಗೆ ತುಂಬಾನೇ ಡಿಮ್ಯಾಂಡ್ ಆರಂಭವಾಗಲು ಕಾರಣ bobo.com ಎಂಬ ಕಂಪನಿ. ಅದರಲ್ಲಿಯೂ ಈ ವಿಡಿಯೋ ಚಾಟಿಂಗ್ ವೆಬ್ ಸೈಟ್‍ ಗೆ ಭೇಟಿ ನೀಡುವವರು ಹೆಚ್ಚಾಗಿ 20 ರಿಂದ 35 ವಯಸ್ಸಿನ ಯುವಕರು. ಹೀಗಾಗಿ ಅವರಿಗಾಗಿಯೇ ಚೀನಾದಲ್ಲಿ ಈ ವೆಬ್‍ಸೈಟ್ ತೆರೆಯಲಾಗಿದೆ. ಇವರ ಜೊತೆ ಚಾಟ್ ಮಾಡುವುದೇ ಯುವತಿಯರ ಕೆಲಸ.

ನೋಡಲು ಸುಂದರವಾಗಿದ್ದು ಅದರಲ್ಲಿಯೂ ಹಾಡಲು, ಕುಣಿಯಲು ಬರುವ ಹುಡುಗಿಯರನ್ನೇ ಈ ವೆಬ್‍ಸೈಟ್‍ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಯುವತಿಯರಿಗೆ ತಿಂಗಳಿಗೆ 10 ಸಾವಿರ ಯಾನ್ ಸಂಬಳವಂತೆ. ಹೀಗಾಗಿ ಕಂಪೆನಿ, ಹುಡುಗರ ಜೊತೆ ಚಾಟ್ ಮಾಡಲು ಒಟ್ಟು 10 ಸಾವಿರ ಹಾಟ್ ಹಾಟ್ ಹುಡುಗಿಯರನ್ನು ಆಯ್ಕೆ ಮಾಡಿದೆ. ಆದರಲ್ಲೂ ಚಾಟ್ ಮಾಡಲು ಯಾವ ಹುಡುಗಿಗೆ ಹೆಚ್ಚು ಬೇಡಿಕೆ ಇದೆಯೋ ಆಕೆಗೆ ಕಂಪೆನಿ ಹೆಚ್ಚಿನ ಸಂಬಳ ನೀಡುತ್ತಿದೆಯಂತೆ. ಒಟ್ಟಿನಲ್ಲಿ ಚಾಟ್ ಮೂಲಕ ಗ್ರಾಹಕರ ಮನದಣಿಸುವ ಈ ಚಾಟಿಂಗ್ ಕನ್ಯೆಯರು ತಿಂಗಳಾಂತ್ಯದಲ್ಲಿ ಭರ್ಜರಿ ಕಾಸು ಪಡೆಯುವುದು ಸುಳ್ಳಲ್ಲ.

Write A Comment