ಅಂತರಾಷ್ಟ್ರೀಯ

ಸೊಳ್ಳೆ ಹಿಡಿಯಲು ಬರಲಿದೆ ಡ್ರೋನ್!

Pinterest LinkedIn Tumblr

drone

ವಾಷಿಂಗ್​ಟನ್: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಸೊಳ್ಳೆಗಳನ್ನು ಹಿಡಿಯುವ ಡ್ರೋನ್ ಅನ್ನು ಮೈಕ್ರೋಸಾಫ್ಟ್ ಸಂಶೋಧಕರು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಮೈಕ್ರೋಸಾಫ್ಟ್ ಸಂಶೋಧಕರು ರೋಗಗಳನ್ನು ಹರಡುವ ವೈರಾಣುಗಳನ್ನು ಅದು ವ್ಯಾಪಕವಾಗಿ ಹರಡುವ ಮುನ್ನವೇ ಗುರುತಿಸಿ ನಾಶ ಪಡಿಸುವ ತಂತ್ರಜ್ಞಾನದ ಅಭಿವೃದ್ಧಿ ಮಾಡುತ್ತಿದ್ದಾರೆ. ಜತೆಗೆ ರೋಗಗಳನ್ನು ಹರಡುವ ಸೊಳ್ಳೆಗಳನ್ನು ಸಮರ್ಥವಾಗಿ ನಿಯಂತ್ರಿಸುವ ಡ್ರೋನ್ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇದರ ಬಳಕೆಯಿಂದ ಆರೋಗ್ಯ ಇಲಾಖೆ ರೋಗಗಳು ಹರಡುವ ಮೊದಲೇ ನಿಯಂತ್ರಿಸಲು ಅನುಕೂಲವಾಗಲಿದೆ.

ಸೊಳ್ಳೆಗಳನ್ನು ಹಿಡಿಯಲು ವಿಶೇಷವಾಗಿ ಡ್ರೋನ್ ರೂಪಿಸುತ್ತಿದ್ದು ಇದು ಹಗುರವಾಗಿರಲಿದ್ದು, ಕಡಿಮೆ ಬ್ಯಾಟರಿ ಬಳಸಿ ಸಮರ್ಥವಾಗಿ ಸೊಳ್ಳೆ ಹಿಡಿಯಲಿದೆ. ಇದರಲ್ಲಿ ಸೊಳ್ಳೆಗಳನ್ನು ಇತರ ಕೀಟಗಳಿಂದ ವಿಂಗಡಿಸಿ ಗುರುತಿಸಬಲ್ಲ ಸೆನ್ಸಾರ್​ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಸೊಳ್ಳೆಗಳನ್ನು ಮಾತ್ರ ಸಮರ್ಥವಾಗಿ ಹತೋಟಿ ಮಾಡಲು ಸಾಧ್ಯವಿದೆ. ಸೊಳ್ಳೆಗಳನ್ನು ಡ್ರೋನ್ ಮೂಲಕ ಸಂಗ್ರಹಿಸಿದ ನಂತರ ಅದನ್ನು ಪರೀಕ್ಷೆಗೆ ಒಳಪಡಿಸಿ ಅದರ ದೇಹದಲ್ಲಿ ಅಡಗಿರುವ ಹಾನಿಕಾರಕ ರೋಗಾಣುಗಳನ್ನು ಪತ್ತೆ ಹಚ್ಚಲಾಗುತ್ತದೆ. ಆನಂತರ ಸಾಂಕ್ರಾಮಿಕ ರೋಗ ಹರಡುವ ವೈರಾಣು ಮತ್ತು ಸೊಳ್ಳೆಗಳ ಹತೋಟಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Write A Comment