ಅಂತರಾಷ್ಟ್ರೀಯ

ಐಎಸ್ ಸಂಘಟನೆಯಲ್ಲಿದ್ದ ಬ್ರಿಟನ್‌ನ ಅತಿ ಕಿರಿಯ ಆತ್ಮಾಹುತಿ ಬಾಂಬರ್

Pinterest LinkedIn Tumblr

Young-ISIS-bomber

ಲಂಡನ್, ಜೂ.15- ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಸೇರಲು ತೆರಳಿದ್ದ 17 ವರ್ಷದ ಬಾಲಕ, ಬ್ರಿಟನ್ನಿನ ಅತ್ಯಂತ ಕಿರಿಯ ವಯಸ್ಸಿನ ಆತ್ಮಾಹುತಿ ಬಾಂಬರ್ ಎಂಬುದು ಅಂತರ್ಜಾಲದಲ್ಲಿ ಪ್ರತ್ಯಕ್ಷವಾಗಿರುವ ದೃಶ್ಯಗಳಿಂದ ಖಚಿತವಾಗಿದೆ. ಭಯಾನಕವಾದ ಐಎಸ್ ಸಂಘಟನೆ ಸದಸ್ಯನಾಗಲು ಬ್ರಿಟನ್ನಿನಿಂದ ತೆರಳಿದ್ದ ಈ ಬಾಲಕ,

ಇತ್ತೀಚೆಗಷ್ಟೆ ತನ್ನನ್ನು ತಾನು ಸ್ಫೋಟಿಸಿಕೊಂಡು ಹಲವು ಜೀವಗಳ ಬಲಿಗೆ ಕಾರಣನಾಗಿದ್ದಾನೆ ಎಂಬುದು ಈ ದೃಶ್ಯಗಳಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೈಜಿಯ ದಕ್ಷಿಣದಲ್ಲಿರುವ ತೈಲ ಸಂಸ್ಕರಣ ಘಟಕವೊಂದರ ಬಳಿ ಸೇನಾ ಪಡೆಗಳ ಮೇಲೆ ನಾಲ್ವರು ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿದ್ದು, ಆ ನಾಲ್ವರಲ್ಲಿ ಬ್ರಿಟನ್ನಿನ ಈ ಬಾಲಕನೂ ಒಬ್ಬ. ಬ್ರಿಟನ್ನಿನ ಅಸ್ಮಲ್ ಎಂಬ ಈ ಬಾಲಕನಿಗೆ ಐಎಸ್‌ಐಎಸ್ ಉಗ್ರ ಸಂಘಟನೆ ಅಬು ಯುಸೂಫ್ ಅಲ್-ಬ್ರಿಟಾನಿ ಎಂಬ ಹೆಸರು ನೀಡಿತ್ತು. ಈ ಬಾಲಕನ ಕುಟುಂಬದವರು ಪಾಕ್ ನಿವಾಸಿಗಳಾಗಿದ್ದು, ಮಗನ ಸಾವಿನಿಂದ ಕಂಗಾಲಾಗಿದ್ದಾರೆ.

Write A Comment