ಕರ್ನಾಟಕ

ಪ್ಲಾಸ್ಟಿಕ್ ಬಳಸಿದರೆ ಕಾಯಿಲೆಗಗಳು ಬರೋದು ಗ್ಯಾರಂಟಿ..!

Pinterest LinkedIn Tumblr

Plastic-in--bang

ಬೆಂಗಳೂರು,ಜೂ.15- ಬೆಂಗಳೂರು ಮೂಲದ ಕೂದಲು ಮತ್ತು ಚರ್ಮದ ಕ್ಲಿನಿಕ್ ಹೇರ್ ಲೈನ್ ಇಂಟರ್ ನ್ಯಾಷನಲ್, ದೈನಂದಿನ ಜೀವನದಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಕಾಯಿಲೆಗೆ ತುತ್ತಾಗಬಹುದು ಎಂಬ ಸಂಶೋಧನಾ ವರದಿಯೊಂದನ್ನು ಹೊರತಂದಿದೆ.

ಪ್ಲಾಸ್ಟಿಕ್ ಕೇವಲ ಪರಿಸರಕ್ಕಷ್ಟೇ ಹಾನಿಕಾರಕವಾಗಿಲ್ಲ, ಆರೋಗ್ಯ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ ಎಂಬ ಕುರಿತು ಅರಿವು ಮೂಡಿಸಲು ಹೇರ್‌ಲೈನ್ ಇಂಟರ್ ನ್ಯಾಷನಲ್, ಮೆರಿಸಿಸ್  ಥೆರಪಿಯಾಟಿಕ್ಸ್ ಜತೆ ಸೇರಿಕೊಂಡು ಪ್ಲಾಸ್ಟಿಕ್‌ನ ಹಾನಿಕಾರಕ ಪರಿಣಾಮಗಳ ಕುರಿತು ಜನರಿಗೆ ತಿಳುವಳಿಕೆ ನೀಡುವ ಜವಾಬ್ದಾರಿ ಹೊತ್ತುಕೊಂಡಿದೆ.   ಪತ್ರಿಕಾಗೋಷ್ಠಿಯಲ್ಲಿ ಸಂಶೋಧನಾ ವರದಿ ಬಿಡುಗಡೆಗೊಳಿಸಿದ ಹೇರ್ ಲೈನ್ ಇಂಟರ್ ನ್ಯಾಷನಲ್ ರಿಸರ್ಚ್ ಆಂಡ್ ಟ್ರೀಟ್ ಮೆಂಟ್ ಸೆಂಟರ್‌ನ ನಿರ್ದೇಶಕ ಬಾಣಿ ಆನಂದ್ ಮಾತನಾಡಿ, ಕೂದಲು ಉದುರುವ ಸಮಸ್ಯೆ ಹೊಂದಿರುವ ನೂರು ರೋಗಿಗಳ ಮೇಲೆ ಎಂಟು ತಿಂಗಳ ಕಾಲ ಬೆಂಗಳೂರಿನ ನಮ್ಮ ನಾಲ್ಕು ಕೇಂದ್ರಗಳಲ್ಲಿ ನಾವು ಒಂದು ಸಂಶೋಧನೆಯನ್ನು ನಡೆಸಿದೆವು.

ಅದರಲ್ಲಿ ನಾವು ಕಂಡುಕೊಂಡ ಸಂಗತಿಯೆಂದರೆ, ಪ್ಲಾಸ್ಟಿಕ್ ನಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ರಾಸಾಯನಿಕವಾದ ಬಿಪಿಎ ಅಥವಾ ಬಿಸಿನಾಲ್ ಎ ಅನ್ನು ಈ ರೋಗಿಗಳ ಪೈಕಿ ಶೇ.90ಕ್ಕೂ ಹೆಚ್ಚು ಮಂದಿ ತಮ್ಮ ರಕ್ತದಲ್ಲಿ ಅಧಿಕ ಮಟ್ಟದಲ್ಲಿ ಹೊಂದಿದ್ದಾರೆ. ರಕ್ತದಲ್ಲಿ ಬಿಪಿಎ ಇರುವುದು ದೈನಂದಿನ ಜೀವನದಲ್ಲಿ ತೀವ್ರವಾದ ಪ್ಲಾಸ್ಟಿಕ್ ಬಳಕೆಯನ್ನು ಸೂಚಿಸುತ್ತದೆ. ಇದು ಕ್ಯಾನ್ಸರ್ ಸೇರಿದಂತೆ ಅನೇಕ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುಬಹುದು ಎಂದರು. ಬಿಪಿಎ ಇರುವಿಕೆಯು ನರ ಸಂಬಂಧಿ ಸಮಸ್ಯೆ, ಥೈರಾಯ್ಡ್ ತೊಂದರೆ, ಹೆಚ್ಚಿದ ಕ್ಯಾನ್ಸರ್ ಹಾಗೂ ಟ್ಯೂಮರ್‌ನ ಅಪಾಯ, ಆಸ್ತಮಾ ಹಾಗೂ ಹೃದಯದ ಕಾಯಿಲೆಗಳು, ಲೈಂಗಿಕ ದೌರ್ಬಲ್ಯ, ಜತೆಗೆ ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಒಂದು ಕಾರಣವಾಗಬಹುದು ಎಂದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಸಿದ ಅವಲೋಕನ ಅಧ್ಯಯನಗಳು ತೋರಿಸಿವೆ ಎಂದು ತಮ್ಮ ಪ್ರಯೋಗಾಲಯದಲ್ಲಿ ಬಿಪಿಎ ಪರೀಕ್ಷೆ ನಡೆಸಿದ ಮೆರಿಸಿಸ್ ಥೆರಪಿಯಾಟಿಕ್ಸ್‌ನ ಸಂಸ್ಥಾಪಕ ನಿರ್ದೇಶಕ ಡಾ.ಕೌಶಿಕ್ ಡಿ ದೇಬ್ ಹೇಳಿದರು.

Write A Comment