ಅಂತರಾಷ್ಟ್ರೀಯ

ಅಮ್ಮನ ಹೆಣದೊಂದಿಗೆ ಮೂರುದಿನ..!

Pinterest LinkedIn Tumblr

yedinbaurg

ಎಡಿನ್‌ಬರ್ಗ್: ಎಷ್ಟೇ ದೊಡ್ಡವರಾದರೂ ಹೆಣವೆಂದರೆ ಹೆದರಿ ದೂರ ಹೋಗೋ ಜನರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹ ತಾಯಿಯ ಮೃತದೇಹದ ಮುಂದೆ ಮೂರು ವರ್ಷದ ಮಗುವೊಂದು ಮೂರುದಿನ ಏಕಾಂಗಿಯಾಗಿ ಕಳೆದ ಆಘಾತಕಾರಿ ಘಟನೆಯೊಂದು ನಡೆದಿದೆ.

ನಂಬಲು ಕಷ್ಟವಾದರೂ ಇದು ಸತ್ಯ. ಅಂದಹಾಗೆ ಈ ಭಯಾನಕ ಘಟನೆ ನಡೆದಿರೋದು ಸ್ಕಾಟ್ಲೆಂಡ್ ರಾಜಧಾನಿ ಎಡಿನ್‌ಬರ್ಗ್‌ನಲ್ಲಿ. ಇಲ್ಲಿನ ಲಿಂಡಾ ಮ್ಯಾಕ್‌ಡೊನಾಲ್ಡ್ ಎಂಬ 28ರ ಹರೆಯದ ಹೇರ್ ಡ್ರೆಸ್ಸರ್, ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವೃತ್ತಿಯಲ್ಲಿ ಬ್ಯೂಟಿಶಿಯನ್ ಆಗಿದ್ದ ಲಿಂಡಾ, ಮಗುವಿನೊಂದಿಗೆ ಮನೆಯಲ್ಲಿದ್ದಾಗ ಈ ದುರಂತ ನಡೆದಿದೆ.

ಆದರೆ ಅಮ್ಮನ ಸಾವಿನ ಪರಿವೇ ಇಲ್ಲದ ಮೂರು ವರ್ಷದ ಮಗು ಮೃತದೇಹದ ಮಗ್ಗಲಲ್ಲೇ ಅನ್ನಾಹಾರವಿಲ್ಲದೆ ಮೂರು ದಿನಗಳನ್ನು ಕಳೆದಿದೆ. ಮೂರು ದಿನ ಕಳೆದರೂ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಮಹಿಳೆಯ ತಂದೆ ಹಾಗೂ ನೆರೆಹೊರೆಯವರು ಪೊಲೀಸರ ನೆರವಿನೊಂದಿಗೆ ಮನೆಗೆ ಬಾಗಿಲು ಒಡೆದಾಗ ಆಕೆ ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ. ಅಚ್ಚರಿಯೆಂಬಂತೆ ಮೃತದೇಹದ ಬಳಿಯಲ್ಲೇ ಮಗುವೂ ಪತ್ತೆಯಾಗಿದೆ. ಮಹಿಳೆಯ ಹಠಾತ್ ಸಾವಿಗೆ ಅಸ್ತಮಾ ಅಟ್ಯಾಕ್ ಕಾರಣವೆಂದು ಹೇಳಲಾಗುತ್ತಿದೆಯಾದರೂ ನಿಖರ ಕಾರಣ ತಿಳಿದುಬಂದಿಲ್ಲ.

Write A Comment